GBA Budget: ಜಿಬಿಎ ಅಡಿಯಲ್ಲಿನ ಐದು ಪಾಲಿಕೆಗಳ ಬಜೆಟ್ ಮಂಡನೆ; ಬೆಂಗಳೂರಿನ ಅಭಿವೃದ್ಧಿಗೆ 20,213 ಕೋಟಿ ರೂ
ಬೆಂಗಳೂರು, ಮಾರ್ಚ್ 28: ಬೆಂಗಳೂರು ಮಹಾಜನತೆಗೆ ಶುಕ್ರವಾರ ಹಾಗೂ ಶನಿವಾರ ಮಹತ್ವದ ದಿನ ಅಂತಾನೇ ಹೇಳಬಹುದು. ಏಕೆಂದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಡಿಯಲ್ಲಿ 5 ನಗರ ಪಾಲಿಕೆಗಳ 2026-27ರ ಸಾಲಿನ ಆಯವ್ಯಯ ಮಂಡನೆಯಾಗಿದೆ. ಒಟ್ಟಾರೆಯಾಗಿ ಬೆಂಗಳೂರಿಗೆ 20 ಸಾವಿರ ಕೋಟಿ ರೂ ಮೀಸಲಿಡಲಾಗಿದೆ. ಬಿಬಿಎಂಪಿ ಇತಿಹಾಸದ ಪುಟಗಳನ್ನು ಸೇರಿದ ಬಳಿಕ ಜಿಬಿಎ ಅಡಿಯಲ್ಲಿ 5 ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಇದಾದ ಬಳಿಕ ಎಲ್ಲಾ ನಗರಗಳ ಚೊಚ್ಚಲ ಬಜೆಟ್‌ಗೆ ಬೆಂಗಳೂರಿಗರು ಸಾಕ್ಷಿಯಾಗಿದ್ದಾರೆ. ಶುಕ್ರವಾರ 3,889 ಕೋಟಿ…