ಬಗೆದಷ್ಟು ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ರಹಸ್ಯ ಬಯಲು: ಸಿದ್ದೇಶ್ವರನ ಸುತ್ತ ನಾಗಸರ್ಪ ಕಾವಲು
ಗದಗ, (ಫೆಬ್ರವರಿ 10): ಗದಗ ಜಿಲ್ಲೆಯ ಮುಂಡರಗಿ ಜಂತ್ಶಿರೂರ ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದ್ದ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನದ ಅಡಿಯಲ್ಲಿ ಸಾಕಷ್ಟು ಸಿರಿ ಸಂಪತ್ತು ಇದೆ ಎಂಬ ಚರ್ಚೆ ಶುರುವಾಗಿದೆ. ಹಳೇ ಕಾಲದ ಸಿದ್ದೇಶ್ವರ ದೇಗುಲ ಸಂಪೂರ್ಣ ಹಾಳಾಗಿದೆ. ನಿಧಿಗಳ್ಳರ ಅಟ್ಟಹಾಸಕ್ಕೆ ದೇವಸ್ಥಾನ ನಾಶವಾಗಿದೆ. ಇನ್ನು ಈ ದೇವಸ್ಥಾನದ ಕೆಳಗೆ ಮತ್ತೊಂದು ದೇಗುಲ ಇದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸಂಜೀವ್ ಪಾಂಡ್ರೆ ಅವರು ಪ್ರತ್ಯಕ್ಷ ವರದಿ ಮಾಡಿದ್ದಾರೆ. ಮತ್ತಷ್ಟು ಸುದ್ದಿ…