211 ವರ್ಕ್ ಇನ್ಸ್ಪೆಕ್ಟರ್ ಹುದ್ದೆ ರದ್ದುಪಡಿಸಿದ್ದ ಸರ್ಕಾರದ ಆದೇಶಕ್ಕೆ ತಡೆ, ಹೈಕೋರ್ಟ್ ಮಹತ್ವದ ತೀರ್ಪು, ಏನಿದು ಪ್ರಕರಣ? | Karnataka Hc Stays Govt Order Canceling 211 Work Inspector Posts Big Relief For Aspirants Rav
2016ರ ಅಧಿಸೂಚನೆಯಂತೆ ಆಯ್ಕೆಯಾದ 211 ವರ್ಕ್ ಇನ್ಸ್ಪೆಕ್ಟರ್ಗಳಿಗೆ ನೇಮಕಾತಿ ಆದೇಶ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ. ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡದೆ, ಕೇವಲ ಸರ್ಕಾರಿ ಆದೇಶದಿಂದ ಕಾನೂನಾತ್ಮಕವಾಗಿ ರಚಿಸಿದ ವೃಂದವನ್ನು ರದ್ದುಪಡಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬೆಂಗಳೂರು (ಮಾ.28) ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡದೆ ಕಾನೂನಾತ್ಮಕವಾಗಿ ರಚಿಸಿದ ವೃಂದ ನಿಯಮಗಳನ್ನು ಕೇವಲ ಸರ್ಕಾರಿ ಆದೇಶದಿಂದ ರದ್ದುಪಡಿಸಲಾಗದು ಎಂದು ಆದೇಶಿಸಿರುವ ಹೈಕೋರ್ಟ್, 2016ರ ಅಧಿಸೂಚನೆಯನ್ವಯ 211 ಕಾರ್ಯ ನಿರೀಕ್ಷಕರ (ವರ್ಕ್ ಇನ್ಸ್ಪೆಕ್ಟರ್) ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ (ಅರ್ಜಿದಾರ) ನೇಮಕಾತಿ…