‘ವೀರ ಕಂಬಳ’ ಸಿನಿಮಾದಲ್ಲಿ ವೀರೇಂದ್ರ ಹೆಗ್ಗಡೆ ನಟಿಸಿದ್ದು ಯಾಕೆ? ಇಲ್ಲಿದೆ ಕಾರಣ
ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (ರಾಜೇಂದ್ರ ಸಿಂಗ್ ಬಾಬು) ಅವರು ನಿರ್ದೇಶನ ಮಾಡಿರುವ ‘ವೀರ ಕಂಬಳ’ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ರಿಲೀಸ್ ದಿನಾಂಕದ ಹತ್ತಿರ ಆಗಿರುವ ಈ ಹೊತ್ತಿನಲ್ಲಿ ಹೊಸ ಅಪ್‌ಡೇಟ್ಸ್ ಹಂಚಿಕೊಳ್ಳಲಾಗುತ್ತಿದೆ. ‘ವೀರ ಕಂಬಳ’ (ವೀರ ಕಂಬಳ) ರೂಪುಗೊಂಡಿದ್ದರ ಹಿಂದೆ ಸಾಕಷ್ಟು ಸುದೀರ್ಘವಾದ ಕಥನವಿದೆ. ಅಂದಾಜು ಏಳುನೂರು ವರ್ಷಗಳಷ್ಟು ಐತಿಹ್ಯವಿರುವ ಕಂಬಳದ ಬಗ್ಗೆ ಇಂಚಿಂಚು ಮಾಹಿತಿಯನ್ನು ಕಲೆಹಾಕುವ ಮೂಲಕ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ. ಈ…