ಇನ್ನು 3 ವರ್ಷದಲ್ಲಿ ಬಾಹ್ಯಾಕಾಶದಲ್ಲೂ ಎಐ ಕೆಲಸ, ಎಲಾನ್ ಮಸ್ಕ್ ಮುಂದಿನ ಗುರಿ ಏನು? | Ai In Space In 3 Years What Is Elon Musk S Next Big Goal
ಭೂಮಿಯ ಮೇಲಿನ ವಿದ್ಯುತ್, ಜಾಗದ ಕೊರತೆ ಮತ್ತು ಅಧಿಕ ತೆರಿಗೆಯಂತಹ ಸಮಸ್ಯೆಗಳನ್ನು ತಪ್ಪಿಸಲು, ಎಲಾನ್ ಮಸ್ಕ್ ಬಾಹ್ಯಾಕಾಶದಲ್ಲಿ ಎಐ ಡೇಟಾ ಸೆಂಟರ್ ಸ್ಥಾಪಿಸುವ ಯೋಜನೆ ಮುಂದಿಟ್ಟಿದ್ದಾರೆ. ಭೂಮಿಯಲ್ಲಿ ಸೌರಫಲಕಗಳ ಮೇಲೆ ಶೇ.100ಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಸೋಲಾರ್ ಪಾರ್ಕ್ ನಿರ್ಮಾಣ ದುಬಾರಿಯಾಗುತ್ತದೆ. ಇದನ್ನು ತಪ್ಪಿಸಲು ವಿಂಡ್ ಮಿಲ್‌ಗಳನ್ನು ಸ್ಥಾಪಿಸಿದರೆ, ಇವುಗಳ ಭವಿಷ್ಯವಿರುವುದು 2030ರ ವರೆಗೆ ಮಾತ್ರ. ಪ್ರಸ್ತುತ ಜಗತ್ತಿನಲ್ಲಿ ಅವುಗಳಿಗೆ ಬೇಕಾಗುವ ಬೃಹತ್ ರೆಕ್ಕೆ ಸೇರಿದಂತೆ ಇತರೆ ಭಾಗಗಳನ್ನು ತಯಾರಿಸುವ ಕೇವಲ 3 ಕಂಪನಿಗಳಿವೆ. ಅವುಗಳಿಂದ…