ಬ್ಯೂಟಿ ಸ್ಪರ್ಧೆಯಲ್ಲಿ ಹೂನಗೆ ಬೀರಿದ ಸುಂದ್ರಿಯ ಹಲ್ಲು ಸೆಟ್ಟೇ ಬಿದ್ದೋಯ್ತು! ವಿಡಿಯೋ ವೈರಲ್ ಆಗೋಯ್ತು
ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸೌಂದರ್ಯ ಸ್ಪರ್ಧೆಯಲ್ಲಿ, ಕಮೋಲ್ವಾನ್ ಚಾನಾಗೊ ಎಂಬ ಸ್ಪರ್ಧಿ ಕ್ಯಾಟ್ವಾಕ್ ಮಾಡುವಾಗ ಮುಗುಳ್ನಕ್ಕರು. ಆ ಕ್ಷಣದಲ್ಲಿ ಅವರ ಹಲ್ಲುಸೆಟ್ಟು ಬಾಯಿಂದ ಜಾರಿ ಬಿದ್ದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.<img><p>ಪ್ರಥಮ ಚುಂಬನೇ ದಂತ ಭಗ್ನಃ ಎನ್ನುವ ಮಾತಿದೆ. ಇದರ ಅರ್ಥ ಮೊದಲ ಬಾರಿಗೆ ಚುಂಬನ ಮಾಡುವಾಗಲೇ ಹಲ್ಲು ಮುರಿದೇ ಹೋಯ್ತು ಎನ್ನುವುದು. ಆದರೆ ಇಲ್ಲಿ ಆಗಿದ್ದು ಮಾತ್ರ ಅಯ್ಯೋ ಪಾಪ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಸುಂದರಿಯೊಬ್ಬಳ ಹಲ್ಲುಸೆಟ್ಟೇ ಬಿದ್ದೋಯ್ತು. ಅದೂ ಸೌಂದರ್ಯ ಸ್ಪರ್ಧೆಯಲ್ಲಿ…