ಬೇಸಿಗೆಯಲ್ಲಿ ದೇಹದ ನೀರಿನಾಂಶ ಕಾಪಾಡಿಕೊಳ್ಳಲು ಈ ಹಣ್ಣುಗಳನ್ನು ಪ್ರತಿನಿತ್ಯ ಸೇವನೆ ಮಾಡಿ
ಜೊತೆಬೇಸಿಗೆ) ಸಮಯದಲ್ಲಿ ವಿಪರೀತ ಉರಿ ಬಿಸಿಲು ನಮ್ಮನ್ನು ಹೈರಾಣಾಗಿ ಬಿಡುತ್ತದೆ. ಈ ಸಮಯದಲ್ಲಿ ದೇಹವನ್ನು ಎಷ್ಟು ಪ್ರಮಾಣದಲ್ಲಿ ತಂಪಾಗಿಸಿ ಮತ್ತು ಚೈತನ್ಯಭರಿತವಾಗಿ ಇಟ್ಟುಕೊಂಡರೂ ಸಾಲದು. ಹೌದು ಉರಿ ಬಿಸಿಲಿನ ಬೇಗೆಗೆ ಬೆವರು ನೀರಂತೆ ಹರಿದು ಹೋಗುತ್ತಾ ಇರುತ್ತದೆ. ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಯಿಂದ ಪಾರಾಗಲು ಜನ ನೀರಿನ ಜೊತೆಗೆ ಫ್ರೂಸ್ ಜ್ಯೂಸ್‌ಗಳನ್ನು ಸಹ ಸೇವಿಸುತ್ತಾರೆ. ಇವುಗಳ ಜೊತೆಗೆ ಈ ಒಂದಷ್ಟು ಹಣ್ಣುಗಳನ್ನು ಸೇವಿಸುವುದರಿಂದ ದೇಹದಲ್ಲಿ ಸಾಕಷ್ಟು ಪ್ರಮಾಣದ ನೀರಿನಾಂಶವನ್ನು ಕಾಪಾಡಿಕೊಳ್ಳಬಹುದು. ನಿರ್ಜಲೀಕರಣದಿಂದ ಪಾರಾಗಲು…