ರಿಪ್ಪನ್‌ಪೇಟೆಯಲ್ಲಿ ಆಕಸ್ಮಿಕವಾಗಿ ಕೆರೆಗೆ ಕಾಲುಜಾರಿ ಬಿದ್ದು SSLC ವಿದ್ಯಾರ್ಥಿ ಸಾವು
<p><strong>ರಿಪ್ಪನ್‍ಪೇಟೆ:</strong> ಈಜಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಇಲ್ಲಿನ ಮದೀನಾ ಕಾಲೋನಿಯ ನಿವಾಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮಹಮ್ಮದ್ ತಮಿಮ್ (16) ಕೃಷಿ ಹೊಂಡದಲ್ಲಿ ಈಜು ಹೊಡೆಯಲು ಹೋಗಿ ನೀರು ಪಾಲಾಗಿರುವುದಾಗಿ ಹೇಳಲಾಗಿದೆ.</p><h2>ಮೂರು ಪಬ್ಲಿಕ್ ಪರೀಕ್ಷೆ ಬರೆದಿದ್ದ</h2><p>ಹೊಸನಗರ ತಾಲೂಕಿನ ಬರುವೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಚೌಡೇಶ್ವರಿ ಬೀದಿಯಲ್ಲಿ ಟ್ಯೂಷನ್‌ಗೆ ತೆರಳಿದ್ದ ಆತ, ಬಳಿಕ ಸ್ನೇಹಿತರೊಂದಿಗೆ ಬರುವೆ ಗ್ರಾಮದ ದಿಬ್ಬದತ್ತ ತೆರಳಿದ್ದಾನೆ. ಈ ವೇಳೆ ಗದ್ದೆಯೊಳಗಿನ ಕೆರೆಯ ಮೇಲೆ ನಡೆಯುತ್ತಿದ್ದಾಗ ಕಾಲುಜಾರಿ…