'ಭಾರತ ಎದುರು ಆಡಬೇಕಂದ್ರೆ..?' ಪಾಕಿಸ್ತಾನದ ಮೂರೂ ಡಿಮ್ಯಾಂಡ್ ರಿಜೆಕ್ಟ್ ಮಾಡಿದಿ ಐಸಿಸಿ! ಕೊನೆಗೂ ತೆಪ್ಪಗಾದ ಪಿಸಿಬಿ
<p>ದುಬೈ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಆಯೋಜನೆಗೆ ಇದ್ದಂತಹ ಅಡ್ಡಿ ಆತಂಕಗಳು ಕೊನೆಗೂ ನಿವಾರಣೆಯಾಗಿದ್ದು, ಭಾರತ ಎದುರು ಮ್ಯಾಚ್ ಆಡಲು ಪಾಕಿಸ್ತಾನ ಒಪ್ಪಿಕೊಂಡಿರುವುದಾಗಿ ಪಾಕ್ ಸರ್ಕಾರ ಘೋಷಿಸಿದೆ. ಇದರ ಜತೆಗೆ ಐಸಿಸಿ, ಪಾಕ್ ಡಿಮ್ಯಾಂಡ್ ರಿಜೆಕ್ಟ್ ಮಾಡಿದೆ.</p><p> </p><img><p>ಬಾಂಗ್ಲಾದೇಶವನ್ನು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗಿಟ್ಟಿದ್ದನ್ನು ವಿರೋಧಿಸಿ, ಪಾಕಿಸ್ತಾನ ಸರ್ಕಾರವು ಇದೇ ಫೆಬ್ರವರಿ 15ರಂದು ನಿಗದಿಯಾಗಿರುವ ಭಾರತ ಎದುರಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಮೈದಾನಕ್ಕಿಳಿಯುವುದಿಲ್ಲ ಎಂದು ಘೋಷಿಸಿತ್ತು. ಒಂದು ವೇಳೆ ಭಾರತ ಎದುರು…