ಬೆಂಗಳೂರು ಏರ್ಪೋರ್ಟ್ಗೆ ಮಾಟ ಮಂತ್ರ ಕೇಸಿಗೆ ಟ್ವಿಸ್ಟ್: ಸ್ವಯಂ ಘೋಷಿತ ಬಾಬಾ ಅರೆಸ್ಟ್!
ಬೆಂಗಳೂರು, (ಮಾರ್ಚ್ 31): ಕೆಐಎಎಲ್ (ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು) ಆಡಳಿತ ಕಚೇರಿಯ ಪೋಸ್ಟ್ ಆಫೀಸ್ ಮೂಲಕ ಪಾರ್ಸೆಲ್ ಒಂದು ಬಂದಿತ್ತು. ಸರಿಯಾಗಿ ಸಿಬ್ಬಂದಿ ಕುತೂಹಲದಿಂದ ಅದನ್ನು ತೆರೆದಿದ್ದಾರೆ. ಆದರೆ ಬಾಕ್ಸ್ನೊಳಗೆ ಇದ್ದದ್ದು ಯಾವುದೋ ಬೆಲೆಬಾಳುವ ವಸ್ತುವಲ್ಲ, ಬದಲಾಗಿ ಭೀತಿ ಹುಟ್ಟಿಸುವ ಮಾಟ-ಮಂತ್ರದ ಸಾಮಗ್ರಿಗಳು ಇದ್ದವು. ಈ ಸಿಬ್ಬಂದಿ ಬೆಚ್ಚಿಬಿದ್ದಿದ್ದು, ಪೂಜೆ ಮಾಡಿ ಪಾರ್ಸೆಲ್ ಮಾಡಲಾಗಿದ್ದ ಈ ವಸ್ತುಗಳನ್ನು ಕಂಡು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದೀಗ ಈ ಪಾರ್ಸೆಲ್ ಪ್ರಕರಣವನ್ನು ಪತ್ತೆ ಹಚ್ಚಿದ್ದು, ಈ…