
ಅಸಲಿ ಆಟ ಈಗ ಶುರು… ಹುಟ್ಟುಹಬ್ಬದ ದಿನವೇ ಗುಡ್ ನ್ಯೂಸ್ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್
<p>ಕೃಷ್ಣಂ ಪ್ರಣಯ ಸಖಿ ಭಾಗ 2 ಆರಂಭವಾಗುತ್ತಿದೆ. ಬಹದ್ದೂರ್ ಚೇತನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಗಣೇಶ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮುನೇಗೌಡ ನಿರ್ಮಾಪಕರು.</p><img><p>ಗೋಲ್ಡನ್ ಸ್ಟಾರ್ ಗಣೇಶ್ ಇಂದು (ಜು.2) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ‘ಕೃಷ್ಣಂ ಪ್ರಣಯಸಖಿ’ ಗೆಲುವಿನ ಹುಮ್ಮಸ್ಸಿನಲ್ಲಿ ಮುನ್ನುಗ್ಗುತ್ತಿರುವ ಅವರ ಕೈಯಲ್ಲಿ ಪ್ರಸ್ತುತ ಐದಾರು ಸಿನಿಮಾಗಳಿವೆ. ಇದೇ ಖುಷಿಯಲ್ಲಿ ಅವರು ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.</p><img><p>ಅವರ ಹುಟ್ಟುಹಬ್ಬ ಪ್ರಯುಕ್ತ ಕೆಲವು ಸಿನಿಮಾ ಘೋಷಣೆಯಾಗಿದೆ. ಇನ್ನು ಕೆಲವರು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಒಂದು ಸಿನಿಮಾ ಶೀರ್ಷಿಕೆ ಘೋಷಣೆಯಾಗಿದೆ. ವಿಶೇಷವಾಗಿ…