ಸುತ್ತಲೂ ಸ್ನೇಹಿತರೇ ಇದ್ದರೂ ಆತ ಮುಳುಗಿದ್ದು ಒಬ್ಬರಿಗೂ ಗೊತ್ತಾಗೇ ಇಲ್ಲ: ಈಜುಕೊಳದಲ್ಲಿ ಮುಳುಗಿ ಯುವಕ ಸಾವು | Friends Around Him But No One Knew He Drowned Youth Dies After Drowning In Pool
ಗುಜರಾತ್‌ನ ಸೂರತ್‌ನಲ್ಲಿರುವ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆಘಾತಕಾರಿ ಸಂಗತಿ ಎಂದರೆ, ಸ್ನೇಹಿತರು ಜೊತೆಯಲ್ಲಿದ್ದರೂ ಆತ ಮುಳುಗುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲ, ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಯುವಕ ಸಾವು ಇದು ಬೇಸಿಗೆ ಸಮಯ ಮಕ್ಕಳಿಗೆ ರಜಾ ಸಮಯ ಬೇಸಿಗೆಯ ಈ ರಜಾ ಸಮಯದಲ್ಲೇ ಮಕ್ಕಳು ದಣಿವಾರಿಸಿಕೊಳ್ಳಲು, ಬೇಸಿಗೆಯ ಬಿಸಲು ಧಗೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನೀರಿನ ಮೂಲಗಳಲ್ಲಿ ಈಜಾಡ್ತಾರೆ. ಆದರೆ ಹೀಗೆ ಈಜಾಡಲು…