ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ಡಿಸಿಎಂ ದೆಹಲಿ ಪ್ರವಾಸ: ಡಿ.ಕೆ. ಶಿವಕುಮಾರ್ ನಡೆಯೇ ಕುತೂಹಲ
ಬೆಂಗಳೂರು, ಫೆಬ್ರವರಿ 09: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿರುವ ಬಜೆಟ್ ಪೂರ್ವಭಾವಿ ಸಭೆಯನ್ನು ಬಿಟ್ಟು ದೆಹಲಿಗೆ ಪ್ರಯಾಣ ಬೆಳೆಸುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಪ್ರಿಯಾಂಕಾ ಗಾಂಧಿ ಅವರು ಅಸ್ಸಾಂ ಚುನಾವಣೆಗೆ ಕರೆದಿರುವ ಸಭೆಯಲ್ಲಿ ಭಾಗವಹಿಸಿದ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ಆದರೆ, ಈ ಭೇಟಿಯು ಕೇವಲ ಚುನಾವಣಾ ಸಭೆಯ ಕಾರಣಕ್ಕೆ ಸೀಮಿತವಾಗಿಲ್ಲ, ಬದಲಾಗಿ ರಾಜ್ಯ ರಾಜಕಾರಣದಲ್ಲಿ ಪರೋಕ್ಷ ಸಂದೇಶ ರವಾನಿಸುವ ಉದ್ದೇಶವಿದೆ ಎಂದು ವಿವರಿಸಲಾಗಿದೆ. ಬಜೆಟ್ ಸಿದ್ಧತೆಗೆ ವಿರೋಧ…