ಫೋರಂ ಮಾಲ್‌ನಲ್ಲಿ ತಮಿಳು ಗಾನ: ಕರವೇ ಕೊಟ್ಟ ಶಾಕ್‌ಗೆ ಹರಿದುಬಂತು ನೋಡಿ ಡಾ.ರಾಜ್ ಕುಮಾರ್ ಗಾಯನ! | Forum Mall Bengaluru Karnataka Rakshana Vedike Activists Protest Tamil Songs Event Sat
ಬೆಂಗಳೂರಿನ ಕೋರಮಂಗಲ ಫೋರಂ ಮಾಲ್‌ನ ಸಂಗೀತ ಕಾರ್ಯಕ್ರಮದಲ್ಲಿ ಕೇವಲ ತಮಿಳು ಹಾಡುಗಳನ್ನು ಹಾಕಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕನ್ನಡ ಕಡೆಗಣನೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ನಂತರ, ಆಯೋಜಕರು ಕ್ಷಮೆಯಾಚಿಸಿ ಡಾ. ರಾಜ್‌ಕುಮಾರ್ ಸಿನಿಮಾಗಳ ಹಾಡುಗಳನ್ನು ಹಾಕಿದರು. ಬೆಂಗಳೂರು (ಫೆ.09): ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಗರದ ಕೋರಮಂಗಲದ ಫೋರಂ ಮಾಲ್‌ನಲ್ಲಿ (Forum Mall) ನಡೆದಿದ್ದು, ಕನ್ನಡದ ನೆಲದಲ್ಲಿ ತಮಿಳು…