Korean game : ಮಕ್ಕಳ ಫೋನ್ ಕಸಿಯೋದು ಪಾಪವೇ? ಕೊರಿಯನ್ ಗೇಮ್ ಚಟದಿಂದ ಮಕ್ಕಳ ರಕ್ಷಣೆ ಹೀಗಿರಲಿ | How To Protect Children From Becoming Addicted To Korean Games
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೇಮ್ ಮಕ್ಕಳ ಜೀವ ತೆಗೆಯುತ್ತಿದೆ. ಒಂದಿಷ್ಟು ಮಂದಿ ಆತ್ಮ*ಹತ್ಯೆ ಮಾಡ್ಕೊಂಡ್ರೆ ಮತ್ತೊಂದಿಷ್ಟು ಮಕ್ಕಳು ಚಟಕ್ಕೆ ಬಿದ್ದು ಭವಿಷ್ಯ ಹಾಳ್ಮಾಡ್ಕೊಳ್ತಿದ್ದಾರೆ. ದಿನ ದಿನಕ್ಕೂ ಪಾಲಕರಲ್ಲಿ ಆತಂಕ ಹೆಚ್ಚಾಗ್ತಿದೆ. ಕೊರಿಯನ್ ಗೇಮ್ ( Korean Game) ಚಟಕ್ಕೆ ಬಿದ್ದು ಬಹುಮಹಡಿ ಕಟ್ಟಡದಿಂದ ಬಿದ್ದು ಆತ್ಮ*ಹತ್ಯೆ ಮಾಡ್ಕೊಂಡ ಮೂವರು ಹೆಣ್ಮಕ್ಕಳ ಕೇಸ್ ಗೆ ಹೊಸ ಹೊಸ ಟ್ವಿಸ್ಟ್ ಸಿಗ್ತಾನೇ ಇದೆ. ಹುಡುಗಿಯರ ಅಪ್ಪ, ಅಮ್ಮನ ಹಿನ್ನೆಲೆಯನ್ನು ಪೊಲೀಸರು ಪತ್ತೆ ಮಾಡ್ತಿದ್ದಾರೆ. ಈ ಮಧ್ಯೆ ಅವರ ತಂದೆ ಚೇತನ್…