ಕಾಫಿನಾಡಿನಲ್ಲಿ ವರುಣನ ಅಬ್ಬರ: ಬಿರುಗಾಳಿ ಸಹಿತ ಧಾರಾಕಾರ ಮಳೆ, ಮೂಡಿಗೆರೆ ರಸ್ತೆಗಳು ಜಲಾವೃತ!
ಚಿಕ್ಕಮಗಳೂರು, ಮಾ.28: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಹವಾಮಾನ ದಿಢೀರ್ ಬದಲಾಗಿದ್ದು, ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದಾದ್ಯಂತ ಬಿರುಗಾಳಿ ಮಳೆ ಸುರಿಯುತ್ತಿದೆ, ತಾಲೂಕಿನ ಗ್ರಾಮೀಣ ಭಾಗದ ಮಳೆಯ ಆರ್ಭಟ ಜೋರಾಗಿದೆ. ಆಲ್ದೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ, ಕಾಫಿ ತೋಟಗಳಿಗೆ ಇದು ಆಸರೆಯಾದರೂ ಬಿರುಗಾಳಿಯ ಭೀತಿ ಆವರಿಸಿದೆ. ಮೂಡಿಗೆರೆಯಲ್ಲಿ ಮಳೆಯ ಅಬ್ಬರ ತೀವ್ರವಾಗಿದ್ದು, ರಸ್ತೆಗಳು ನದಿಯಂತಾಗಿವೆ. ವಾಹನಗಳು ತುಂಬಿ ಹರಿಯುತ್ತಿವೆ, ವಾಹನ…