Love Mocktail 3 ಕೃತಿಚೌರ್ಯ ವಿವಾದ ಸುಖಾಂತ್ಯ: ಒಂದಾದ ಡಾರ್ಲಿಂಗ್ ಕೃಷ್ಣ-ಗುರು ದೇಶಪಾಂಡೆ! | Love Mocktail 3 Script Controversy Resolved Darling Krishna Guru Deshpande Gvd
ಈ ಕಥೆಯ ತಿರುಳನ್ನು ಒಂದೇ ಮೂಲದಿಂದ ಇಬ್ಬರೂ ಸ್ಫೂರ್ತಿ ಪಡೆದಿದ್ದಾರೆ. ಹೀಗಾಗಿ ಡಾರ್ಲಿಂಗ್ ಕೃಷ್ಣ ಅವರ ‘ಲವ್ ಮಾಕ್‌ಟೇಲ್ 3’ ಚಿತ್ರಕಥೆಯೇ ಬೇರೆ ಹಾಗೂ ಗುರು ದೇಶಪಾಂಡೆ ಬಳಿಯಿರುವ ಚಿತ್ರಕಥೆಯೇ ಬೇರೆ. ಕೃತಿಚೌರ್ಯ ಆರೋಪಕ್ಕೆ ತುತ್ತಾಗಿದ್ದ ‘ಲವ್ ಮಾಕ್‌ಟೇಲ್ 3’ ಚಿತ್ರದ ವಿವಾದ ಸುಖಾಂತ್ಯಗೊಂಡಿದೆ. ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ರಾಘವೇಂದ್ರ ನಾಯಕ್ ಮತ್ತು ಡಾರ್ಲಿಂಗ್ ಕೃಷ್ಣ ಒಂದೇ ಮೂಲದಿಂದ ಸ್ಫೂರ್ತಿ ಪಡೆದು ಕತೆ ರಚಿಸಿದ್ದಾರೆ ಎಂದು ನಿರ್ಧಾರಕ್ಕೆ ಬರಲಾಗಿದ್ದು, ಕೃತಿಚೌರ್ಯ ಆರೋಪವನ್ನು ನಿರಾಕರಿಸಲಾಗಿದೆ. ಶುಕ್ರವಾರ ವಾಣಿಜ್ಯ…