ಸಾರಿಗೆ ಅಧಿಕಾರಿ ಉಸ್ತುವಾರಿಯಲ್ಲೇ ಭಾರಿ ತೆರಿಗೆ ವಂಚನೆ ದಂಧೆ: ಕೋಟಿ ರೂ. ಬೆಲೆಯ ಐಷಾರಾಮಿ ಕಾರಿಗೆ ಲಕ್ಷ ಮೌಲ್ಯದ ನೋಂದಾಣಿ!
ಮರ್ಸಿಡಿಸ್-ಬೆಂಜ್ ಕಾರು, ನಕಲಿ ದಾಖಲೆ ಮಂಗಳೂರು, ಜೂನ್ 25: ಈಗಾಗಲೇ ನಗರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ಕೋಟ್ಯಂತರ ರೂ ತೆರಿಗೆ (Tax) ವಂಚನೆ ದಂಧೆಯೊಂದು ಬೆಳಕಿಗೆ ಬಂದಿದೆ. ಮಂಗಳೂರು ಸಾರಿಗೆ ಅಧಿಕಾರಿ ಉಸ್ತುವಾರಿಯಲ್ಲೇ ಕೋಟ್ಯಂತರ ರೂ ಬೆಲೆಯ ಕಾರಿನ (luxury car) ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಭಾರಿ ವಂಚನೆ ಮಾಡಿರುವುದು ಪತ್ತೆ ಆಗಿದೆ. ಐಶಾರಾಮಿ ಕಾರುಗಳ ತಪಾಸಣೆ ವೇಳೆ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಸದ್ಯ ಕಾರು ಸೀಜ್ ಮಾಡಿ…