Headlines
ರಾಷ್ಟ್ರಪತಿಗೆ ‘ಸಿತಾರೆ ಜಮೀನ್ ಪರ್’ ಸಿನಿಮಾ ತೋರಿಸಿದ ಆಮಿರ್ ಖಾನ್

ರಾಷ್ಟ್ರಪತಿಗೆ ‘ಸಿತಾರೆ ಜಮೀನ್ ಪರ್’ ಸಿನಿಮಾ ತೋರಿಸಿದ ಆಮಿರ್ ಖಾನ್

ಕಳೆದ ಶುಕ್ರವಾರ (ಜೂನ್ 20) ಬಿಡುಗಡೆ ಆದ ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುವುದರ ಜೊತೆಗೆ ಪಾಸಿಟಿವ್ ವಿಮರ್ಶೆಯನ್ನು ಕೂಡ ಈ ಸಿನಿಮಾ ಪಡೆದುಕೊಂಡಿದೆ. ನಟ ಆಮಿರ್ ಖಾನ್ (Aamir Khan) ಅವರಿಗೆ ಈ ಸಿನಿಮಾದಿಂದ ಗೆಲುವು ಸಿಕ್ಕಿದೆ. ಈ ಚಿತ್ರದಲ್ಲಿ ವಿಶೇಷ ಕಥಾಹಂದರ ಇದೆ. ಆ ಕಾರಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರಿಗೆ ಸಿನಿಮಾ ತೋರಿಸಲಾಗಿದೆ. ರಾಷ್ಟ್ರಪತಿ…

Read More
ಅಹಮದಾಬಾದ್‌ನ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 275 ಮಂದಿ ಸಾವು; ಸರ್ಕಾರದಿಂದ ಅಧಿಕೃತ ಘೋಷಣೆ

ಅಹಮದಾಬಾದ್‌ನ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 275 ಮಂದಿ ಸಾವು; ಸರ್ಕಾರದಿಂದ ಅಧಿಕೃತ ಘೋಷಣೆ

ನವದೆಹಲಿ, ಜೂನ್ 24: ಜೂನ್ 12ರಂದು ಗುಜರಾತ್​​ನ ಅಹಮದಾಬಾದ್‌ನಲ್ಲಿ (Ahmedabad Plane Crash) ಸಂಭವಿಸಿದ ಏರ್ ಇಂಡಿಯಾ (Air India) ವಿಮಾನ ಅಪಘಾತದಲ್ಲಿ 275 ಜನರು ಸಾವನ್ನಪ್ಪಿದ್ದಾರೆ ಎಂದು ಗುಜರಾತ್ ಆರೋಗ್ಯ ಇಲಾಖೆ ಇಂದು ದೃಢಪಡಿಸಿದೆ. ಈ ಘಟನೆಯ ನಂತರ ಬಿಡುಗಡೆಯಾದ ಮೊದಲ ಅಧಿಕೃತ ಸಾವಿನ ಸಂಖ್ಯೆ ಇದು. ಅಧಿಕಾರಿಗಳ ಪ್ರಕಾರ, ಮೃತರಲ್ಲಿ 241 ಮಂದಿ ಬೋಯಿಂಗ್ 787-8 ಡ್ರೀಮ್‌ಲೈನರ್‌ನಲ್ಲಿದ್ದರೆ, ಈ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ…

Read More
ಚಾಮರಾಜನಗರದಲ್ಲಿ ಸರ್ಕಾರಿ ಶಾಲೆಯಲ್ಲಿ ಒಬ್ಬನೇ ವಿದ್ಯಾರ್ಥಿ: ಏನಾಯ್ತು ಈ ಕನ್ನಡ ಶಾಲೆ..?

ಚಾಮರಾಜನಗರದಲ್ಲಿ ಸರ್ಕಾರಿ ಶಾಲೆಯಲ್ಲಿ ಒಬ್ಬನೇ ವಿದ್ಯಾರ್ಥಿ: ಏನಾಯ್ತು ಈ ಕನ್ನಡ ಶಾಲೆ..?

ಹೊಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಾಮರಾಜನಗರ, ಜೂನ್​ 24: ಗಡಿ ಜಿಲ್ಲೆ ಚಾಮರಾಜನಗರದಲ್ಲಿ (Chamrajanagar) ಕಳೆದ ವರ್ಷಕ್ಕಿಂತ ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಯಲ್ಲಿ (Government School) ದಾಖಲಾತಿ ಪಡೆದಿದ್ದು, ಇದಕ್ಕೆ ಕಾರಣ ಸರ್ಕಾರಿ ಶಾಲೆಯ ಶಿಕ್ಷಕನ ವಿನೂತ ಅಭಿಯಾನ ಎಂದು ವರದಿಯಾಗಿತ್ತು. ಆದರೆ ಇದೀಗ, ಇದೇ ಚಾಮರಾಜನಗರ ಜಿಲ್ಲೆಯಲ್ಲಿನ ಒಂದು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತಕ್ಕೆ ತಲುಪಿದೆ. ಚಾಮರಾಜನಗರ ತಾಲೂಕಿನ ಹೊಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೋಷಕರು…

Read More
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ

ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ

ಲಖೀಂಪುರ ಖೇರಿ, ಜೂನ್ 24: ಉತ್ತರ ಪ್ರದೇಶದ (Uttar Pradesh) ಲಖಿಂಪುರ ಖೇರಿಯ ಧೌರ್ಪುರ್ ಅರಣ್ಯ ಪ್ರದೇಶದ ಜುಗ್ನುಪುರ್ ಪ್ರದೇಶದ ಇಟ್ಟಿಗೆ ಗೂಡುಗಳಲ್ಲಿ ಕೆಲಸಗಾರರ ಮೇಲೆ ಕಪ್ಪು ಚಿರತೆಯೊಂದು ದಾಳಿ ಮಾಡಿತು. ಈ ವೇಳೆ ಯುವಕನೊಬ್ಬ ಚಿರತೆಯನ್ನು ಕೆಡವಿ ಅದರ ಜೊತೆ ಸೆಣಸಾಡಿದ್ದಾನೆ. ಈ ಗದ್ದಲದಿಂದ ಎಚ್ಚೆತ್ತ ಗ್ರಾಮಸ್ಥರು ಒಟ್ಟುಗೂಡಿ ಕಪ್ಪು ಚಿರತೆಯ (Black Leopard) ಮೇಲೆ ಇಟ್ಟಿಗೆಗಳು ಮತ್ತು ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಘಟನೆಯ ವಿಡಿಯೋದಲ್ಲಿ ಕಪ್ಪು ಚಿರತೆ ಯುವಕನ…

Read More
ಯುವಕರ ಹಠಾತ್ ಹೃದಯಾಘಾತ: ಸರ್ಕಾರ ನೇಮಿಸಿದ ಸಮಿತಿ ವರದಿಯಲ್ಲಿ ಆತಂಕಕಾರಿ ಅಂಶ ಬಯಲು

ಯುವಕರ ಹಠಾತ್ ಹೃದಯಾಘಾತ: ಸರ್ಕಾರ ನೇಮಿಸಿದ ಸಮಿತಿ ವರದಿಯಲ್ಲಿ ಆತಂಕಕಾರಿ ಅಂಶ ಬಯಲು

ಬೆಂಗಳೂರು, (ಜೂನ್ 24): ಈ ಹಿಂದೆ 40 ವರ್ಷ‌ ಮೇಲ್ಪಟ್ಟವರಲ್ಲಿ ಹೃದಯಾಘಾತ (Heart attack) ಸಂಭವಿಸುತ್ತಿತ್ತು. ಆದ್ರೆ, ಇದೀಗ ಯುವ ಸಮೂಹವನ್ನ ಈ ಹಾರ್ಟ್ ಅಟ್ಯಾಕ್ ಎನ್ನುವುದು ಕಾಡತೊಡಗಿದೆ. ಯುವಕರಲ್ಲಿ (Y0uths) ಹೆಚ್ಚು ಹೃದಯಾಘಾತವಾಗುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಕಾರಣ ಹುಡುಕಲು ಸಮಿತಿಗೆ ಹೇಳಿತ್ತು. ಇದೀಗ ಜಯದೇವ ಹೃದ್ರೋಗ (Jayadeva Institute of Cardiovascular Sciences and Research)ಸಂಸ್ಥೆಯ ನಿರ್ದೇಶಕ‌ ರವೀಂದ್ರ ಅಧ್ಯಕ್ಷತೆಯ ಸಮಿತಿ ವರದಿ ಸಿದ್ಧವಾಗಿದ್ದು, ಇನ್ನೆರಡು ದಿನಗಳಲ್ಲಿ ಸಿಎಂ ಸಿದ್ದರಾಮಯ್ಯನವರ…

Read More
ಸ್ನೇಹಿತನ ಕೊಲೆ: ತನಿಖೆಯಲ್ಲಿ ಪರಸ್ತ್ರೀಯೊಂದಿಗಿನ ಲವ್ವಿಡವ್ವಿ ಬಯಲು

ಸ್ನೇಹಿತನ ಕೊಲೆ: ತನಿಖೆಯಲ್ಲಿ ಪರಸ್ತ್ರೀಯೊಂದಿಗಿನ ಲವ್ವಿಡವ್ವಿ ಬಯಲು

ಬೆಂಗಳೂರು, ಜೂನ್​ 24: ಬೆಂಗಳೂರಿನ (Bengaluru) ಬಂಡೆಪಾಳ್ಯದ ಅಂಬೇಡ್ಕರ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಉತ್ತರ ಪ್ರದೇಶ ಮೂಲದ ಸತೀಶ್ ಯಾದವ್ ಎಂಬಾತ ಕಳೆದ ಗುರುವಾರ ಮಧ್ಯರಾತ್ರಿ ಪೊಲೀಸರಿಗೆ ಕರೆ ಮಾಡಿ ತನ್ನ ಸ್ನೇಹಿತ ಶೈಲೆಂದ್ರ ಯಾದವ್ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದಾನೆ. ತಕ್ಷಣವೇ ಬಂಡೇಪಾಳ್ಯ ಪೊಲೀಸರು (Bandepalya Police) ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಮೃತದೇಹದ ಮೈ ಮೇಲೆ ಯಾವ ಗಾಯದ ಗುರುತು ಇಲ್ಲದ್ದರಿಂದ ಯುಡಿಆರ್ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ, ಸೋಮವಾರ (ಜೂ.23)…

Read More
ಕಾಡುಗೋಡಿಯಲ್ಲಿ ₹4,000 ಕೋಟಿ ಮೌಲ್ಯದ ಭೂಮಿ ವಶ, ಇದು ಅತೀ ದೊಡ್ಡ ಒತ್ತುವರಿ ತೆರವು | Karnataka Forest Department Recovers 120 Acres Of Encroached Land Gow

ಕಾಡುಗೋಡಿಯಲ್ಲಿ ₹4,000 ಕೋಟಿ ಮೌಲ್ಯದ ಭೂಮಿ ವಶ, ಇದು ಅತೀ ದೊಡ್ಡ ಒತ್ತುವರಿ ತೆರವು | Karnataka Forest Department Recovers 120 Acres Of Encroached Land Gow

ಬೆಂಗಳೂರಿನ ಕಾಡುಗೋಡಿಯಲ್ಲಿ ಅತಿಕ್ರಮಣಗೊಂಡಿದ್ದ ₹4,000 ಕೋಟಿ ಮೌಲ್ಯದ 120 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಒಟ್ಟಾರೆಯಾಗಿ 248 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ₹8,000 ಕೋಟಿ ಎಂದು ಅಂದಾಜಿಸಲಾಗಿದೆ. ಅತಿಕ್ರಮಣ ತಡೆಗಟ್ಟಲು ಬೇಲಿ ಹಾಕಿ ಗಿಡ ನೆಡಲಾಗುವುದು. ಬೆಂಗಳೂರಿನಲ್ಲಿ ಅತಿಕ್ರಮಣಗೊಂಡ ಅರಣ್ಯ ಭೂಮಿಗಳನ್ನು ವಶಪಡಿಸಿಕೊಳ್ಳುವ ಮಹತ್ತರ ಕಾರ್ಯಾಚರಣೆಯ ಭಾಗವಾಗಿ, ಕಾಡುಗೋಡಿಯಲ್ಲಿ ಸುಮಾರು 120 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ, ಪೊಲೀಸರ ಸಹಾಯದಿಂದ ತೆರವುಗೊಳಿಸಿದೆ. ಈ ಭೂಮಿಯ ಮಾರುಕಟ್ಟೆ ಮೌಲ್ಯ ಸುಮಾರು ₹4,000…

Read More
IPO ಇಳಿಯುವ ಮುನ್ನ ಸ್ಟಾರ್ಟ್‌ಅಪ್‌ ಕಂಪನಿಯಲ್ಲಿ 250 ಕೋಟಿ ಹೂಡಿಕೆ ಮಾಡಿದ ಕಾಮತ್‌ ಬ್ರದರ್ಸ್‌! | Nikhil And Nithin Kamath Brothers Invest Rs 250 Crore In Incred Ahead Of Ipo San

IPO ಇಳಿಯುವ ಮುನ್ನ ಸ್ಟಾರ್ಟ್‌ಅಪ್‌ ಕಂಪನಿಯಲ್ಲಿ 250 ಕೋಟಿ ಹೂಡಿಕೆ ಮಾಡಿದ ಕಾಮತ್‌ ಬ್ರದರ್ಸ್‌! | Nikhil And Nithin Kamath Brothers Invest Rs 250 Crore In Incred Ahead Of Ipo San

ಜೆರೋಧಾ ಸಂಸ್ಥಾಪಕರಾದ ನಿಖಿಲ್ ಮತ್ತು ನಿತಿನ್ ಕಾಮತ್ ಇನ್‌ಕ್ರೆಡ್ ಹೋಲ್ಡಿಂಗ್ಸ್‌ನಲ್ಲಿ ₹250 ಕೋಟಿ ಹೂಡಿಕೆ ಮಾಡಿದ್ದಾರೆ, ಇದು ಭಾರತದ ವೇಗವಾಗಿ ವಿಕಸನಗೊಳ್ಳುತ್ತಿರುವ ಡಿಜಿಟಲ್ ಸಾಲ ಕ್ಷೇತ್ರದಲ್ಲಿ ಅವರ ನಂಬಿಕೆಯನ್ನು ಸೂಚಿಸುತ್ತದೆ. ಬೆಂಗಳೂರು (ಜೂ.24): ಜೆರೋಧಾ ಸಂಸ್ಥಾಪಕರಾದ ನಿಖಿಲ್ ಕಾಮತ್ ಮತ್ತು ನಿತಿನ್ ಕಾಮತ್, ಇನ್‌ಕ್ರೆಡ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (IFSL) ನ ಮೂಲ ಕಂಪನಿಯಾದ ಇನ್‌ಕ್ರೆಡ್ ಹೋಲ್ಡಿಂಗ್ಸ್ ಲಿಮಿಟೆಡ್‌ನಲ್ಲಿ ಸಣ್ಣ ಪಾಲನ್ನು ಪಡೆದುಕೊಂಡಿದ್ದಾರೆ. ಈ ಜೋಡಿ ₹250 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದೆ. ಈ ಕ್ರಮವು ಭಾರತದ…

Read More
‘ದಿ ಫ್ಯಾಮಿಲಿ ಮ್ಯಾನ್ 3’ ಮೇಲಿನ ನಿರೀಕ್ಷೆ ಹೆಚ್ಚಿಸಿದ ಹೊಸ ಪೋಸ್ಟರ್

‘ದಿ ಫ್ಯಾಮಿಲಿ ಮ್ಯಾನ್ 3’ ಮೇಲಿನ ನಿರೀಕ್ಷೆ ಹೆಚ್ಚಿಸಿದ ಹೊಸ ಪೋಸ್ಟರ್

ಭಾರತದ ವೆಬ್ ಸಿರೀಸ್​ಗಳಲ್ಲಿ ‘ದಿ ಫ್ಯಾಮಿಲಿ ಮ್ಯಾನ್’ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಎರಡು ಸೀಸನ್​ಗಳಲ್ಲಿ ಈ ವೆಬ್ ಸರಣಿ ಯಶಸ್ವಿ ಆಗಿದೆ. ‘ದಿ ಫ್ಯಾಮಿಲಿ ಮ್ಯಾನ್’ ಮತ್ತು ‘ದಿ ಫ್ಯಾಮಿಲಿ ಮ್ಯಾನ್ 2’ ಯಶಸ್ಸಿನ ಬಳಿಕ ‘ದಿ ಫ್ಯಾಮಿಲಿ ಮ್ಯಾನ್ 3’ (The Family Man Season 3) ಬರುತ್ತಿದೆ. ಈ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಮನೆ ಮಾಡಿದೆ. ನಟ ಮನೋಜ್ ಬಾಜಪಾಯಿ (Manoj Bajpayee) ಅವರು ಈ ಬಾರಿ ಕೂಡ ಪ್ರಮುಖ ಪಾತ್ರ…

Read More
ಬೆಂಗಳೂರಿನ ರಾಮ್​, ಪುಣೆಯ ಶ್ಯಾಮ್​: ಮೊದಲ ನೋಟದಲ್ಲೇ ಲವ್! ಮನೆಯವರಿಂದ ಅದ್ದೂರಿ ಮದುವೆ | Shyam And Rams Enduring Love Story Across Cities And Challenges Suc

ಬೆಂಗಳೂರಿನ ರಾಮ್​, ಪುಣೆಯ ಶ್ಯಾಮ್​: ಮೊದಲ ನೋಟದಲ್ಲೇ ಲವ್! ಮನೆಯವರಿಂದ ಅದ್ದೂರಿ ಮದುವೆ | Shyam And Rams Enduring Love Story Across Cities And Challenges Suc

ಪ್ರತಿಬಾರಿಯೂ ಒಂದು ಗಂಡಿಗೆ, ಒಂದು ಹೆಣ್ಣು ಎನ್ನುವ ನಿಯಮ ಆಗಲೇಬೇಕೆಂದೇನಿಲ್ಲ. ಗಂಡಿಗೆ ಗಂಡು, ಹೆಣ್ಣಿಗೆ ಹೆಣ್ಣು ಎನ್ನುವ ನಿಯಮವೂ ಅನ್ವಯ ಆಗಿಬಿಡುತ್ತದೆ. ಅಂಥದ್ದೇ ಒಂದು ಕುತೂಹಲದ ಲವ್​ಸ್ಟೋರಿ ಇಲ್ಲಿದೆ…  ಮದುವೆ ಎನ್ನುವುದು ಎರಡು ಹೃದಯಗಳನ್ನು ಒಂದು ಮಾಡುವ ಪುಣ್ಯದ ಕಾರ್ಯ ಎನ್ನಲಾಗುತ್ತದೆ. ಆದರೆ ಅದು ಗಂಡು-ಹೆಣ್ಣೇ ಆಗಿರಬೇಕೆಂದೇನೂ ಇಲ್ಲ. ಏಕೆಂದರೆ ಪ್ರಕೃತಿಯ ಲೀಲೆಯೇ ವಿಚಿತ್ರವಾದದ್ದು. ಒಂದು ಗಂಡಿಗೆ ಒಂದು ಹೆಣ್ಣು ಎನ್ನುವುದು ಪ್ರಕೃತಿಯ ನಿಯಮ ಎಂದೇ ಹೇಳಲಾದರೂ, ಇದೇ ಪ್ರಕೃತಿ ಗಂಡಿಗೆ ಗಂಡಿನ ಮೇಲೆ ಹೆಣ್ಣಿಗೆ ಹೆಣ್ಣಿನ…

Read More