17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಕೈ ಶಾಸಕ ಪಾಟೀಲ್
ಕಲಬುರಗಿ, (ಜೂನ್ 22): ಆಳಂದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಒಂದಲ್ಲ ಒಂದು ವಿಚಾರದಲ್ಲಿ ತಮ್ಮದೇ ಸರ್ಕಾರವನ್ನು ಮುಜುಗರಕ್ಕೀಡಾಗುವಂತೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅಷ್ಟೇ ಹಸ್ತಕ್ಷೇಪ ಬಗ್ಗೆ ಸಿಎಂಗೆ ಪತ್ರ ಬರೆದು ಉಲ್ಲೇಖಿಸಿ ಪರೋಕ್ಷವಾಗಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಬಳಿಕ ಏಕಾಏಕಿ ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ರು. ಇದೀಗ ಮನೆ ಹಂಚಿಕೆಯಲ್ಲಿ ಲಂಚ ಬಗ್ಗೆ ಆಡಿಯೋವೊಂದನ್ನು ಹರಿಬಿಟ್ಟಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಸಂಬಂಧ…