IND vs ENG: ಸೊನ್ನೆಗೆ ಜೀವದಾನ ನೀಡಿ 99 ರನ್ಗಳ ದಂಡ ಕಟ್ಟಿದ ಟೀಂ ಇಂಡಿಯಾ
ಲೀಡ್ಸ್ ಟೆಸ್ಟ್‌ನ ಮೂರನೇ ದಿನದಂದು ಭಾರತೀಯ ಬೌಲರ್‌ಗಳು ಮತ್ತು ಫೀಲ್ಡರ್‌ಗಳು ಮಾಡಿದ ತಪ್ಪುಗಳ ಸಂಪೂರ್ಣ ಲಾಭವನ್ನು ಇಂಗ್ಲೆಂಡ್‌ನ ಯುವ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ (Harry Brook) ಬಳಸಿಕೊಂಡರಾದರೂ ಶತಕದಂಚಿನಲ್ಲಿ ಎಡವಿದರು. ಆದಾಗ್ಯೂ ಟೀಂ ಇಂಡಿಯಾ (Team India) ತಾನು ಮಾಡಿದ ತಪ್ಪಿಗೆ ಬರೋಬ್ಬರಿ 99 ರನ್ಗಳ ದಂಡ ಕಟ್ಟಿದೆ. ಸೊನ್ನೆಗೆ ಕ್ಯಾಚ್ ನೀಡಿದ್ದ ಬ್ರೂಕ್ಸ್ಗೆ ಒಂದೇ ಇನ್ನಿಂಗ್ಸ್ನಲ್ಲಿ ಒಂದಲ್ಲ, ಎರಡಲ್ಲ, 3 ಜೀವದಾನಗಳು ಸಿಕ್ಕವು. ಇದರ ಸಂಪೂರ್ಣ ಲಾಭ ಇಂಗ್ಲೆಂಡ್ ತಂಡಕ್ಕಾದರೆ, ಟೀಂ ಇಂಡಿಯಾಕ್ಕೆ ಭಾರಿ ಹೊಡೆತ…