ವಸತಿ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಿ: ಆರ್ ಅಶೋಕ್
ವಿಪಕ್ಷ ನಾಯಕ ಆರ್. ಅಶೋಕ್ ಮಂಡ್ಯ, ಜೂನ್ 22: ವಸತಿ ಯೋಜನೆಯಲ್ಲಿ 2137.44 ಕೋಟಿ ಭ್ರಷ್ಟಾಚಾರ ನಡೆದಿದೆ. ಬಿಜೆಪಿ ಆಪಾದನೆ ಸುಳ್ಳಾದರೆ ಸಿಬಿಐಗೆ ವಹಿಸಿ ಸತ್ಯಾಂಶ ಬಯಲಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಆರೋಪಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಡವರ ಮನೆಗೆ ಕನ್ನ ಹಾಕಿದ ಕಾಂಗ್ರೆಸ್ನವರು ಉತ್ತರ ಕೊಡಬೇಕು. ಸಿಎಂ ಸಿದ್ದರಾಮಯ್ಯ (Siddaramaiah) ಮೂಗನಾಗಬೇಡ, ಬಾಯ್ಬಿಡಪ್ಪ. ಬಡವರ ಹಣವನ್ನು ತಿಂದ ನಿಮಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ಮಾಡಿದರು….