ಬಿಜೆಪಿಗೆ ಶಾಕ್ ಕೊಟ್ಟ ಮಿತ್ರಪಕ್ಷ ಜೆಡಿಎಸ್: ಚಿಗುರೊಡೆಯುತ್ತಿದ್ದ ಕಮಲವನ್ನ ಚಿವುಟಿ ಹಾಕಿದ ದಳಪತಿ
ಬೆಂಗಳೂರು, (ಜೂನ್ 22): ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬೆಂಗಳೂರು ಭೇಟಿ ಬಳಿಕ ಕರ್ನಾಟಕ ಬಿಜೆಪಿಯಲ್ಲಿ (Karnataka BJP) ರಾಜಕೀಯ ಚಟುವಟಿಕೆಗಳಲ್ಲಿ ಬದಲಾವಣೆ ಕಾಣಿಸಿಕೊಂಡಿದೆ. ಶಾ ಬೆಂಗಳೂರಿಗೆ ಬಂದು ಹೋದಾಗಲೆಲ್ಲಾ ರಾಜ್ಯ ಬಿಜೆಪಿಗೊಂದು ಇಂಜೆಕ್ಷನ್ ಕೊಟ್ಟು ಹೋಗುತ್ತಾರೆ ಎಂಬುದು ಪಕ್ಷದ ಪಡಸಾಲೆಯಲ್ಲಿ ಹಿಂದಿನಿಂದಲೂ ಇರುವ ಮಾತು. ಮತ್ತೊಮ್ಮೆ ಅದಕ್ಕೆ ಪೂರಕವಾದ ಬೆಳವಣಿಗೆಗಳು ನಡೆದಿವೆ. ಇದರ ಮಧ್ಯೆ ಮಿತ್ರ ಪಕ್ಷ ಜೆಡಿಎಸ್ (JDS), ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದೆ. ಹೌದು…2023ರ ಚುನಾವಣೆಯಲ್ಲಿ ಮೈಸೂರು ಜಿಲ್ಲೆ…