ಪ್ರತಿದಿನ ಬೆಂಗಳೂರಿನಲ್ಲಿ 2500 ಹೊಸ ವಾಹನ ನೋಂದಣಿ! ಟ್ರಾಫಿಕ್, ವಾಯುಮಾಲಿನ್ಯದಲ್ಲಿ ದೆಹಲಿಯನ್ನೂ ಮೀರಿಸುವ ಆತಂಕ
ಬೆಂಗಳೂರು, ಜೂನ್ 23: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ರಸ್ತೆಗಿಳಿಯುತ್ತಿರುವ ಹೊಸ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ.ಕಳೆದ ವರ್ಷ ಪ್ರತಿದಿನ ಎರಡು ಸಾವಿರ ಹೊಸ ವಾಹನಗಳು ನೋಂದಣಿ (Vehicle Registration) ಆಗಿದ್ದರೆ, ಈ ವರ್ಷ 500 ಹೆಚ್ಚಾಗಿದ್ದು, ಪ್ರತಿದಿನ 2500 ಹೊಸ ವಾಹನಗಳು ರಿಜಿಸ್ಟ್ರೇಷನ್ ಆಗುತ್ತಿವೆ. ಅದರಲ್ಲಿ ಬೈಕ್ಗಳದ್ದೇ ಸಿಂಹಪಾಲು. ಪ್ರತಿದಿನ ಸರಾಸರಿ 1580 ಬೈಕ್ಗಳು ನೋಂದಣಿ ಆಗ್ತಿದ್ರೆ, 484 ಕಾರುಗಳು, 320 ಸಾರಿಗೆ ವಾಹನಗಳು ಸೇರಿದಂತೆ ಒಟ್ಟು ಪ್ರತಿದಿನ ಸರಾಸರಿ 2500 ರಷ್ಟು ಹೊಸ…