ಸುಳ್ಳು ಸುದ್ದಿಗೆ 7 ವರ್ಷ ಸೆರೆಮನೆ 10 ಲಕ್ಷ ದಂಡ, ತಪ್ಪು ಮಾಹಿತಿಗೂ ಜೈಲು ಶಿಕ್ಷೆ: ಮಸೂದೆ ಮಂಡಿಸಿದ ಕರ್ನಾಟಕ!
ಸಾಮಾನ್ಯ ರೀತಿಯ ತಪ್ಪು ಮಾಹಿತಿಗೆ ಕನಿಷ್ಠ 2 ರಿಂದ ಗರಿಷ್ಠ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ, ಪ್ರತಿದಿನ ₹25,000 ವರೆಗಿನ ದಂಡವನ್ನು ವಿಧಿಸುವ ಯೋಜನೆ ಈ ಮಸೂದೆಯಲ್ಲಿ ಒಳಗೊಂಡಿದೆ. ಈ ಪ್ರಕರಣಗಳನ್ನು ತ್ವರಿತವಾಗಿ ನಿಭಾಯಿಸಲು ಸರ್ಕಾರ ವಿಶೇಷ ನ್ಯಾಯಾಲಯಗಳ ಸ್ಥಾಪನೆಯತ್ತ ಮುಂದಾಗಿದೆ. ಈ ಮಸೂದೆ cognisable (ವಾರಂಟ್ ಇಲ್ಲದ ಬಂಧನ) ಮತ್ತು non-bailable (ಜಾಮೀನು ರಹಿತ ) ಎಂದು ಗುರುತಿಸಲಾಗಿದ್ದು, ತಪ್ಪಿತಸ್ಥರಿಗೆ ಸುಲಭವಾಗಿ ಜಾಮೀನು ದೊರೆಯುವ ಸಾಧ್ಯತೆ ಇರುವುದಿಲ್ಲ. ಕಂಪನಿಗಳು ಅಥವಾ ಸಂಸ್ಥೆಗಳ ಮೂಲಕ…