ಇಸ್ರೇಲ್ ದಾಳಿಗೆ ಇರಾನ್ ಅಣು ಘಟಕ, 6 ಏರ್ಪೋರ್ಟ್, 15 ವಿಮಾನ ಧ್ವಂಸ! | Israeli Air Forces Attacks 6 Airports 15 Iranian Aircraft Destroyed Rav
ಅಮೆರಿಕದ ಬಾಂಬ್ ದಾಳಿಯ ನಂತರ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ಇಸ್ರೇಲ್ ಇರಾನ್‌ನ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಇರಾನ್ ಪ್ರಮುಖ ನಗರಗಳ ಮೇಲೆ ಪ್ರತಿದಾಳಿ ನಡೆಸಿದೆ. ದುಬೈ (ಜೂ.24): ಅಮೆರಿಕದ ಭಾರೀ ಬಾಂಬ್ ದಾಳಿ ಬೆನ್ನಲ್ಲೇ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್, ಇಸ್ರೇಲ್ ಮೇಲೆ ‘ಟ್ರೂ ಪ್ರಾಮಿಸ್ 3’ ಹೆಸರಲ್ಲಿ ಹಲವು ನಗರಗಳ ಮೇಲೆ ದಾಳಿ ನಡೆಸಿದೆ. ಅದರ ಬೆನ್ನಲ್ಲೇ ಇರಾನ್‌ನ ಫೋರ್ಡೋ…