ವಕ್ಫ್ ಆಯ್ತು, ರೈತರ ಪಹಣಿಯಲ್ಲಿ ಸರ್ಕಾರ ಅಂತ ನಮೂದು: ಆತಂಕದಲ್ಲಿ ನರಗುಂದ ಅನ್ನದಾತರು
ಗದಗ, ಜೂನ್ 22: ನರಗುಂದ (Nargund) ತಾಲೂಕಿನ ಹದಲಿ, ಖಾನಾಪುರ, ಗಂಗಾಪುರ ಸೇರಿದಂತೆ ಐದು ಗ್ರಾಮದ ನೂರಾರು ರೈತರ ಜಮೀನು ಪಹಣಿ ಪತ್ರದ ಕಾಲಂ ನಂಬರ್ 9 ರಲ್ಲಿ ‘ಸರಕಾರ’ (Government) ಅಂತ ನಮೂದು ಮಾಡಲಾಗಿದೆ. ಇದಕ್ಕೆ ಕಾರಣ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಹಲವು ಗ್ರಾಮಗಳ ರೈತರು ನೀರಾವರಿ ಕರವನ್ನು ಸರ್ಕಾರಕ್ಕೆ ತುಂಬದೆ ಇರುವುದರಿಂದ, 1995 ರಲ್ಲಿ ಅಂದಿನ ತಹಶೀಲ್ದಾರ ರೈತರ ಗಮನಕ್ಕೆ ತರದೆ ಪಹಣಿ ಪತ್ರದ ಕಾಲಂ ನಂಬರ್ 9 ರಲ್ಲಿ ಸರ್ಕಾರ ಅಂತ ನಮೂದು…