ಸಿನಿಮಾದವರ ಕಥೆ ಹೇಳುವ ‘ಫಸ್ಟ್ ಡೇ ಫಸ್ಟ್ ಶೋ’ ಚಿತ್ರ; ಗಮನ ಸೆಳೆದ ಟ್ರೇಲರ್
ಸಿನಿಮಾ ಮಂದಿಯ ಬಗ್ಗೆಯೇ ಕಥೆ ಇರುವ ಸಿನಿಮಾಗಳ ಸಾಕಷ್ಟು ಬಂದಿವೆ. ಅವುಗಳ ಸಾಲಿಗೆ ಸೇರ್ಪಡೆ ಆಗುತ್ತಿರುವ ಇನ್ನೊಂದು ಸಿನಿಮಾ ‘ಫಸ್ಟ್ ಡೇ ಫಸ್ಟ್ ಶೋ’. ಈ ಚಿತ್ರದ ಟ್ರೇಲರ್ (1st Day 1st Show Trailer) ಬಿಡುಗಡೆ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ರಂಗದ ಪರಿಸ್ಥಿತಿ ಬದಲಾಗಿದೆ. ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಒಟಿಟಿಯಲ್ಲೇ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಚಿತ್ರಮಂದಿರದ ಸಂಸ್ಕೃತಿ ಮರೆಯಾಗುತ್ತಿದೆ ಎಂಬುದು ಹಲವರ ಅಭಿಪ್ರಾಯ. ಫಸ್ಟ್ ಡೇ ಫಸ್ಟ್ ಶೋ ಎಂಬ ಕ್ರೇಜ್…