ರಾತ್ರಿ ಜೋರಾಗಿ ಗೊರಕೆ ಹೊಡೆಯುತ್ತೀರಾ? ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣವಾಗಿರಬಹುದು ಎಚ್ಚರ
ನಿದ್ರೆ (sleep) ಮನುಷ್ಯನ ಆರೋಗ್ಯಕ್ಕೆ ಬಹಳ ಮುಖ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿದೆ. ನೀವು ಯಾರನ್ನೇ ಕೇಳಿ ಸರಿಯಾಗಿ ನಿದ್ರೇನೇ ಬರಲ್ಲ, ರಾತ್ರಿ 2 ಗಂಟೆ ಆದ್ರೂ ಕಣ್ಣಿಗೆ ನಿದ್ದೆ ಹತ್ತಲ್ಲ. ಮಧ್ಯರಾತ್ರಿ ಎಚ್ಚರವಾದ್ರೆ ಮತ್ತೆ ಮಲಗೋದು ಬಹಳ ಕಷ್ಟ, ಹೀಗೆ ನಿದ್ರೆ ಸರಿಯಾಗಿ ಆಗದಿರುವವರ ಲಿಸ್ಟ್ ದೊಡ್ಡದಾಗಿರುತ್ತದೆ. ಹತ್ತರಲ್ಲಿ ಏಳು ಮಂದಿ ಈ ರೀತಿ ಸಮಸ್ಯೆಗಳಿಂದ ಒದ್ದಾಡುತ್ತಿರುತ್ತಾರೆ. ನಿದ್ರೆ ಸರಿಯಾಗಿ ಬಂದಿಲ್ಲ ಅಂದ್ರೆ ಏನು? ನಾಳೆ ನಿದ್ದೆ ಮಾಡಿದ್ರೆ ಆಯ್ತ ಬಿಡು…