ಆರ್ಯನ್ ಯಾವಾಗ್ಲೂ ಮುಸ್ಲಿಂ ಆಗಿಯೇ ಗುರುತಿಸಿಕೊಳ್ಳಲು ಇಷ್ಟಪಡ್ತಾನೆ: ಗೌರಿ ಖಾನ್ | Aryan Khan Always Wants To Identify As Muslim Gauri Khan
ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮಕ್ಕಳ ಧರ್ಮದ ಬಗ್ಗೆ ಗೌರಿ ಖಾನ್ ಅವರ ಹಳೆಯ ಮಾತುಗಳು ಈಗ ವೈರಲ್ ಆಗಿವೆ. ಶಾರುಖ್ ಖಾನ್ (Shahrukh Khan) ಹಾಗೂ ಪತ್ನಿ ಗೌರಿ ಖಾನ್ (Gauri Khan) ಅವರದ್ದು ಅಂತರ್ಧರ್ಮಿಯ ಮದುವೆ(interfaith marriage). ಆರಂಭದಲ್ಲಿ ಈ ಜೋಡಿಯೂ ಸಾಕಷ್ಟು ತೊಂದರೆಗಳನ್ನು ಈ ಕಾರಣಕ್ಕೆ ಎದುರಿಸಿದ್ದರು. ಆದರೆ ಧರ್ಮವನ್ನು ಮೀರಿ ಪ್ರೀತಿ ಗೆದ್ದಿದೆ ಎಂಬುದಕ್ಕೆ ಮೂರು ದಶಕಗಳಿಗೂ ಅಧಿಕ ಕಾಲ ಯಾವುದೇ ವಿರಸವಿಲ್ಲದೇ ಸಾಗಿದ ಇವರ ದಾಂಪತ್ಯ ಜೀವನವೇ…