ಅನಂತ್ ಕುಮಾರ್ ಹೆಗಡೆ ಗಲಾಟೆ ಪ್ರಕರಣ: ಶಾಸಕ ಸುರೇಶ್ ಗೌಡ ಹೇಳಿದ್ದೇನು? ಇಲ್ಲಿದೆ ನೋಡಿ
ನೆಲಮಂಗಲ, ಜೂನ್ 24: ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ (Anantkumar Hegde) ವಿರುದ್ಧ ಕೇಳಿಬಂದಿರುವ ಹಲ್ಲೆ ಪ್ರಕರಣ ಸಂಬಂಧ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅವರು, ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಸಣ್ಣಮಟ್ಟಿನ ಕಾರು ಅಪಘಾತದಿಂದ ಗಲಾಟೆ ನಡೆದಿದೆ ಎಂದ ಅವರು, ಅನಂತ್ ಕುಮಾರ್ ಹೆಗಡೆ ಹಾಗೂ ಹಲ್ಲೆಗೊಳಗಾದವರ ಬಳಿ ಮಾತುಕತೆ…