IND vs ENG: ‘ಬೇಸರವಾಯ್ತು, ಹಾಗಂತ…’; ಕ್ಯಾಚ್‌ಗಳನ್ನು ಕೈಚೆಲ್ಲಿದ ಬಗ್ಗೆ ಮೌನ ಮುರಿದ ಬುಮ್ರಾ
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ (India vs England Test) ಫೀಲ್ಡಿಂಗ್ ನಿರಾಶಾದಾಯಕವಾಗಿತ್ತು. ಒಂದೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಒಂದಲ್ಲ, ಎರಡಲ್ಲ, ಬರೋಬ್ಬರಿ 6 ಕ್ಯಾಚ್‌ಗಳನ್ನು ಕೈಬಿಟ್ಟಿತು. ಇದರಿಂದಾಗಿ, ಟೀಂ ಇಂಡಿಯಾ 471 ರನ್ ಗಳಿಸಿದ್ದರೂ ಕೇವಲ 6 ರನ್‌ಗಳ ಮುನ್ನಡೆ ಪಡೆಯಲು ಸಾಧ್ಯವಾಯಿತು. ಟೀಂ ಇಂಡಿಯಾ ಜೀವದಾನ ನೀಡಿದ ಆಟಗಾರರು ಬಿಗ್ ಇನ್ನಿಂಗ್ಸ್ ಆಡಿದ ಕಾರಣ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 465 ರನ್ ಕಲೆಹಾಕಿತು. ಈ ಕ್ಯಾಚ್‌ಗಳನ್ನು ಕೈಬಿಡುವ ಮೂಲಕ…