ನಟನೆ ನನ್ನ ಪ್ಯಾಷನ್, ಐಟಿ ಉದ್ಯೋಗ ನನ್ನ ಆರ್ಥಿಕ ಶಕ್ತಿ: ನಟಿ ರವೀಕ್ಷಾ ಶೆಟ್ಟಿ ಹೇಳಿಕೆ | Working As A Software Engineer Gives Me Financial Independence To Pursue Acting Says Raviksha Shetty
ಮಂಗಳೂರಿನವರಾದ ರವೀಕ್ಷಾ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ನಟನೆಯ ಮೇಲಿನ ಆಸಕ್ತಿಯಿಂದ ಸಿನಿಮಾ ಕ್ಷೇತ್ರಕ್ಕೆ ಬಂದವರು. ಪೀಟರ್ ಸಿನಿಮಾದಲ್ಲಿ ನಟಿಸಿರುವ ನಟಿ ರವೀಕ್ಷಾಗೆ ‘ಪುರುಷೋತ್ತಮನ ಪ್ರಸಂಗ’ ಅವಕಾಶ ಸಿಕ್ಕಿದ್ದು ಆಕಸ್ಮಿಕ. ಬೆಂಗಳೂರು: ಚಿತ್ರರಂಗದ ಬಣ್ಣದ ಲೋಕ ಅನೇಕರಿಗೆ ಕನಸಿನ ತಾಣ. ಆದರೆ, ಇಲ್ಲಿನ ಅನಿಶ್ಚಿತತೆ ಮತ್ತು ಸವಾಲುಗಳನ್ನು ಅರಿತು, ತಮ್ಮ ವೃತ್ತಿಜೀವನವನ್ನು ಸಮತೋಲನದಿಂದ ನಿಭಾಯಿಸುವವರು ಕೆಲವರು ಮಾತ್ರ. ಅಂತಹ ವಿಶಿಷ್ಟ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭೆ ರವೀಕ್ಷಾ ಶೆಟ್ಟಿ (Raviksha Shetty). ನಟ ರಾಜೇಶ್ ಧ್ರುವ ಅಭಿನಯದ ‘ಪೀಟರ್’ ಚಿತ್ರದಲ್ಲಿ…