ಬೆಂಗಳೂರು ಎರಡು ದಿನ ವಿದ್ಯುತ್ ವ್ಯತ್ಯಯ, ಈ ಏರಿಯಾಗಳಲ್ಲಿ ಇಂದು ನಾಳೆ ಪವರ್ ಕಟ್!

ಬೆಂಗಳೂರು (ಜೂ.25): ನಗರದ ಹಲವು ಬಡಾವಣೆಗಳಲ್ಲಿ ಇಂದು (ಜೂನ್ 25) ಮತ್ತು ನಾಳೆ (ಜೂನ್ 26) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ. ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಈ ವ್ಯತ್ಯಯ ಉಂಟಾಗಲಿದ್ದು, ನಿವಾಸಿಗಳು ಮುಂಚಿತವಾಗಿ ತಯಾರಿ ನಡೆಸಿಕೊಳ್ಳಲು ಸೂಚಿಸಲಾಗಿದೆ.

ಬುಧವಾರ ಎಲ್ಲೆಲ್ಲಿ ವ್ಯತ್ಯಯ?

ಬುಧವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ, 66/11 ಕೆ.ವಿ ಪೂರ್ವಾಂಕರ ಪಾಮ್ ಬೀಚ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕೆಲಸದಿಂದಾಗಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಳ್ಳಲಿದೆ.

ಹಳೆಹಳ್ಳಿ,…