ಸಿನಿಮಾಗಳು ತೋಪಾದರೂ, ಅಪ್ಪನ ಹಣಬಲ ಇಲ್ಲದೆಯೂ ಶ್ರೀಮಂತನಾದ ಈ ಬಾಲಿವುಡ್ ನಟ; ಹೇಗೆ ಸಾಧ್ಯ?
ವಿವೇಕ್ ಓಬೇರಾಯ್ ಹೆಸರು ಕೇಳಿರಬಹುದು. ಎರಡು ದಶಕಗಳಿಂದ ಭಾರತೀಯ ಸಿನಿರಂಗದಲ್ಲಿ ಚಿರಪರಿಚಿತವಾಗಿರುವ ನಟ. ಮೊದಲ ಕೆಲ ಚಿತ್ರಗಳ ಮೂಲಕ ಒಮ್ಮೆಲೇ ಸ್ಟಾರ್ ಆದ ವಿವೇಕ್ ಒಬೇರಾಯ್ (Vivek Oberoi) ಅವರ ಸಿನಿಮಾ ವೃತ್ತಿಜೀವನ ಯಶಸ್ಸಿನ ಮಟ್ಟ ಏರುವಲ್ಲಿ ವಿಫಲವಾಗಿದೆ. ಸದ್ಯ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಕೆಲ ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ಪರದೆ ಮೇಲೆ ಅಸ್ತಿತ್ವ ಉಳಿಸಿಕೊಂಡು ಬಂದಿದ್ದಾರೆ. ಆದರೆ, ವಿವೇಕ್ ಓಬೇರಾಯ್ ಅವರು ಸಿನಿಮಾ ಫೀಲ್ಡ್ನಲ್ಲಿ ತೋಪಾದರೂ ಬ್ಯುಸಿನೆಸ್ ಫೀಲ್ಡ್ನಲ್ಲಿ ಸೈ ಎನಿಸಿದ್ದಾರೆ….