ಹೇಳದೆಯೇ ಜೊತೆಯಾಗಿ ಬಂದು ಅಜ್ಜ ಅಜ್ಜಿಗೆ 15 ಮೊಮ್ಮಕ್ಕಳ ಬಿಗ್ ಸರ್‌ಪ್ರೈಸ್: ವೀಡಿಯೋ ವೈರಲ್ | 15 Grandchildrens Surprise Visit Brings Joy To Grandparents Heartwarming Video
ಮೊಮ್ಮಕ್ಕಳು ಅಜ್ಜ ಅಜ್ಜಿಯರಿಗೆ ಅಚ್ಚರಿ ನೀಡಲು ಅವರಿಗೆ ಹೇಳದೆಯೇ ರಾತ್ರಿಯ ವೇಳೆ ಒಟ್ಟಾಗಿ ಮನೆಗೆ ಬಂದು ಸರ್‌ಪ್ರೈಸ್ ನೀಡಿದ್ದು, ಅವರ ಭಾವುಕ ವೀಡಿಯೋ ವೈರಲ್ ಆಗಿದೆ. ಮೊಮ್ಮಕ್ಕಳು ಹಾಗೂ ಅಜ್ಜ ಅಜ್ಜಿಯರು(Grand parents) ಒಳ್ಳೆಯ ಸ್ನೇಹಿತರು, ಕೆಲ ಪುಟ್ಟ ಅಪರಾಧಗಳಿಗೆ ಒಳ್ಳೆಯ ಪಾರ್ಟನರ್‌ಗಳು, ಅಜ್ಜ ಅಜ್ಜಿಯ ಜೊತೆ ಕಳೆದ ಕ್ಷಣಗಳನ್ನು ಮಕ್ಕಳು ದೊಡ್ಡವರಾದರು ಮರೆಯುವುದಿಲ್ಲ, ಅನೇಕರಿಗೆ ಅಜ್ಜ ಅಜ್ಜಿಯ ಜೊತೆ ಕಳೆದ ನೆನಪುಗಳು ಸದಾ ಹಸಿರಾಗಿದ್ದು, ತಮಗೆ ಮಕ್ಕಳಾದ ನಂತರವೂ ಆ ನೆನಪುಗಳನ್ನು ಅವರು ಮಕ್ಕಳೊಂದಿಗೆ ಹೇಳಿ…