ಬೆಂಗಳೂರಲ್ಲಿ ಡ್ಯಾನ್ಸ್ ಕಾರ್ಯಕ್ರಮದ ಹೆಸರಲ್ಲಿ ವಂಚನೆ: ಸಾವಿರಾರು ರೂ ಪಡೆದು ಅವಕಾಶ ನೀಡಿದ ಮಹಿಳೆ
ಡ್ಯಾನ್ಸ್ ಕಾರ್ಯಕ್ರಮದ ಹೆಸರಲ್ಲಿ ವಂಚನೆ ಬೆಂಗಳೂರು, ಜೂನ್ 23: ತಮ್ಮ ಮಕ್ಕಳು ದೊಡ್ಡ ಸ್ಟೇಜ್ ಮೇಲೆ ಕಾಣಿಸಿಕೊಳ್ಳಬೇಕು ಅನ್ನೋದು ಎಲ್ಲಾ ಪೋಷಕರ ಆಸೆಯಾಗಿರುತ್ತೆ. ಆದರೆ ಪೋಷಕರ ಕನಸುಗಳೆ ಹಣ ಮಾಡುವವರಿಗೆ ಬಂಡವಾಳವಾಗಿದೆ. ವೇದಿಕೆ ಮೇಲೆ ಡ್ಯಾನ್ಸ್ (Dance) ಮಾಡಲು ಅವಕಾಶ ಕೊಡುವುದಾಗಿ ಸಾವಿರಾರು ರೂ ಹಣ ಪಡೆದ ಓರ್ವ ಮಹಿಳೆ (woman), ಅವಕಾಶ ಕೊಡದೆ ಯಾಮಾರಿಸಿರುವಂತಹ ಘಟನೆ ನಡೆದಿದೆ. ತಡರಾತ್ರಿ ಬೆಂಗಳೂರಿನ ಟೌನ್ಹಾಲ್ ಮುಂದೆ ಹೈಡ್ರಾಮಾವೇ ನಡೆಯಿತು. ಅಷ್ಟಕ್ಕೂ ಇಲ್ಲಿ ಆಗಿದ್ದಿಷ್ಟೇ, ಹೀನಾ ಜೈನ್ ಎಂಬ ಮಹಿಳೆ…