ಬೆಳಗಾವಿ: ಸ್ವಾಮೀಜಿಯಿಂದ ಅನಾಚರ ಆರೋಪ, ಮಠಕ್ಕೆ ನುಗ್ಗಿ ಯುವಕರಿಂದ ನೈತಿಕ ಪೊಲೀಸಗಿರಿ
ಬೆಳಗಾವಿ, ಜೂನ್ 23: ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದ ಅಡವಿಸಿದ್ದೇಶ್ವರ ಮಠದಲ್ಲಿ ಸ್ವಾಮೀಜಿಯಿಂದ (Swamiji) ಅನಾಚಾರ ಆರೋಪ ಕೇಳಿಬಂದಿದೆ. ಮಹಿಳೆಯೊಂದಿಗೆ (woman) ಅಡವಿಸಿದ್ದರಾಮಶ್ರೀ ಸ್ವಾಮೀಜಿ ಇದ್ದಾರೆಂದು ಮಠಕ್ಕೆ ನುಗ್ಗಿದ ಯುವಕರು, ಸ್ವಾಮೀಜಿ ಮೇಲೆ ಹಲ್ಲೆ ಮಾಡಿ ನೈತಿಕ ಪೊಲೀಸಗಿರಿ ಮಾಡಿರುವಂತಹ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಕೆಲ ಯುವಕರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಮಹಿಳೆಯ ಮಗಳ ಬಟ್ಟೆ ಹರಿದು ಎಳೆದಾಡಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಡೆದದ್ದೇನು? ಬಾಗಲಕೋಟೆ ಮೂಲದ ಮಹಿಳೆ ಮತ್ತು…