ಮಂಗಳೂರು: ಒಂದೇ ಮನೆಯ 7 ದನ ಕರುಗಳು ನರಳಿ ನರಳಿ ನಿಗೂಢ ಸಾವು
ಮಂಗಳೂರು, ಜೂನ್ 23: ಮಂಗಳೂರು (Mangaluru) ನಗರ ಹೊರವಲಯದ ನೀರು ಮಾರ್ಗ ಸಮೀಪದ ಕೆಲರಾಯಿ ಎಂಬಲ್ಲಿ ವಿಚಿತ್ರವಾದ ಘಟನೆಯೊಂದು ನಡೆಯುತ್ತಿದೆ. ಕಳೆದ 50 ವರ್ಷಗಳಿಂದ ಹೈನುಗಾರಿಕೆಯನ್ನೇ ಮಾಡಿಕೊಂಡು ಬಂದಿರುವ ಪ್ರಕಾಶ್ ಅವರ ದನಗಳು (Cattle) ನಿಗೂಢವಾಗಿ ಸಾವಿಗೀಡಾಗಿವೆ. ಒಟ್ಟು 37 ದನಗಳಲ್ಲಿ 7 ದನಗಳು ಮೃತಪಟ್ಟಿವೆ. ಕೆಲ ದಿನಗಳ ಹಿಂದೆ ಮನೆ ಸಮೀಪದ ಗುಡ್ಡ ಪ್ರದೇಶಕ್ಕೆ ಮೇಯಲು ಹೋಗಿದ್ದ ದನಗಳು ಅಸ್ವಸ್ಥ ಸ್ಥಿತಿಯಲ್ಲಿ ವಾಪಾಸು ಕೊಟ್ಟಿಗೆಗೆ ಬಂದಿದ್ದವು. ಮೇಯಲು ಹೋಗಿದ್ದ 12 ದನಗಳಲ್ಲಿ ಎರಡು ಗರ್ಭ ಧರಿಸಿದ್ದ…