ಫ್ರಿಜ್‌ನಲ್ಲಿ ಇಟ್ಟ ಆಹಾರ ತಿಂದು ಮಗು ಸಾವು- ದಂಪತಿ ತೀವ್ರ ಅಸ್ವಸ್ಥ: ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ | 5 Year Old Childs Death Last Year Traced To Rotten Vangi Bath Kept In Fridge Suc
ಆಹಾರಗಳನ್ನು ಫ್ರಿಜ್‌ನಲ್ಲಿ ಇಟ್ಟು ತಿನ್ನುವವರಿಗೆ ಇದು ಎಚ್ಚರಿಕೆಯ ಗಂಟೆ! ಫ್ರಿಜ್‌ನಲ್ಲಿಟ್ಟ ವಾಂಗಿಬಾತ್ ತಿಂದು ಬೆಂಗಳೂರಿನಲ್ಲಿ ಮಗುವಿನ ಸಾವು, ದಂಪತಿ ತೀವ್ರ ಅಸ್ವಸ್ಥ! ಈಗಂತೂ ಫ್ರಿಜ್ ಎನ್ನುವುದು ಪ್ರತಿ ಮನೆಯ ಅವಶ್ಯಕತೆ ಆಗಿಬಿಟ್ಟಿದೆ. ಆದರೆ ಫ್ರಿಜ್ ಎನ್ನುವುದು ಹಲವರ ಮನೆಯಲ್ಲಿ ಗೋಡೋನ್ ಕೂಡ ಆಗಿಬಿಟ್ಟಿದೆ. ಅಡುಗೆ ಮನೆಯಲ್ಲಿ ಇರಬೇಕಿರುವ ಬಹುತೇಕ ಪದಾರ್ಥಗಳು ಫ್ರಿಜ್‌ನಲ್ಲಿ ಇಡಲಾಗುತ್ತದೆ. ಬೇಳೆ-ಕಾಳುಗಳಿಂದ ಹಿಡಿದು, ಅಳಿದುಳಿದ ಅನ್ನ, ಸಾಂಬಾರು, ಸಾರು, ದೋಸೆ ಹಿಟ್ಟು… ಹೀಗೆ ಏನು ಬೇಕೋ ಎಲ್ಲವೂ ಫ್ರಿಜ್‌ನಲ್ಲಿ ಶೇಖರಿಸಿ ಇಡುವುದು ಬಹುತೇಕರಿಗೆ ರೂಢಿ….