ಡಿಸಿಸಿ ಬ್ಯಾಂಕ್ ನೌಕರರಿಗೆ 15 ವರ್ಷದ ಕರಾರು ಕಿರಿಕಿರಿ; 14 ಜನ ರಾಜೀನಾಮೆ, ಸಹಿ ಹಾಕದವರಿಗೆ ಬಾಗಿಲು ಕಾಯೋ ಶಿಕ್ಷೆ!
<p><strong>ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ </strong></p><p><strong>ಕೊಡಗು (ಜೂ.23): </strong>ಕೆಲಸ ಮಾಡಲಿಲ್ಲ ಎಂದರೆ ಅಥವಾ ಕೆಲಸಕ್ಕೆ ನಿರಂತರವಾಗಿ ಗೈರು ಹಾಜರಾದರೆ ಅಂತಹವರರಿಗೆ ಯಾವುದೇ ಸಂಸ್ಥೆಗೆ ನೋಟಿಸ್ ನೀಡುವ ಮುಂದುವರೆದು ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಇರುತ್ತೇ ಅಲ್ವಾ.? ಆದರೆ ಬ್ಯಾಂಕೊಂದು ಮುಂದಿನ 15 ವರ್ಷಗಳ ಕಾಲ ಕೆಲಸ ಬಿಡುವುದಿಲ್ಲ ಎಂದು ಬಾಂಡ್ ಬರೆದುಕೊಡದ ಕಾರಣಕ್ಕೆ ನೌಕರರನ್ನು ಕೆಲಸದಿಂದ ಹೊರ ಹಾಕಿರುವ ಆರೋಪ ಕೇಳಿ ಬಂದಿದೆ.</p><p>ರೈತರಿಗಾಗಿ ಇರುವ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ರಾಜ್ಯದಲ್ಲಿ ಒಳ್ಳೆಯ ಹೆಸರು…