Sourav Ganguly Biopic: ಸೌರವ್ ಗಂಗೂಲಿ ಬಯೋಪಿಕ್ಗೆ ನಾಯಕ ಫಿಕ್ಸ್; ಚಿತ್ರೀಕರಣ ಯಾವಾಗ ಆರಂಭ?
ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅವರ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ ಬರಲಿದೆ ಎಂಬ ಸುದ್ದಿ ಬಹಳ ಹಿಂದೆಯೇ ಹೊರಬಿದ್ದಿತ್ತು. ಇದೀಗ ಈ ಬಯೋಪಿಕ್ (biopic) ಬಗ್ಗೆ ಸ್ವತಃ ಗಂಗೂಲಿ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದ ಗಂಗೂಲಿಗೆ ಪ್ರಪಂಚದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರ ಬಯೋಪಿಕ್ಗೆ ಸಂಬಂಧಿಸಿದ ಕೆಲಸಗಳು ಶುರುವಾಗಿದ್ದು, ಚಿತ್ರೀಕರಣ 2026 ರಿಂದ ಪ್ರಾರಂಭವಾಗಲಿದೆ ಎಂದು ಗಂಗೂಲಿ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, ಪ್ರಸಿದ್ಧ ಬಾಲಿವುಡ್…