ಒಂದೆಡೆ ವಯಸ್ಸಾದ ತಾಯಿ, ಇನ್ನೊಂದೆಡೆ ಸಾಕಲಾಗದ ಸ್ಥಿತಿಯಲ್ಲಿ ಮಗ: ಕರಳು ಚುರ್ ಎನ್ನುತ್ತೆ
ಮಂಡ್ಯ, (ಜೂನ್ 23): ಮನುಷ್ಯನಿಗೆ ಕಷ್ಟಗಳು ಬರುತ್ತಲೇ ಇರುತ್ತವೆ. ಅಂತಹ ಕಷ್ಟಗಳು ಕೂಡ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಆದ್ರೆ, ಇಲ್ಲೋರ್ವನಿಗೆ ತಾಯಿಯನ್ನು ಸಾಕಲಾಗದಷ್ಟು ಕಷ್ಟ, ಕಡುಬಡತನವಿದೆ. ಹೌದು….ಹೆತ್ತು, ಹೊತ್ತು ಸಾಕಿದ ತಾಯಿಗೆ (Mother) ವಯಸ್ಸಾದ ಕಾಲದಲ್ಲಿ ಆಸರೆಯಾಗಬೇಕಿದ್ದ ಮಗನೇ ಆಕೆಯನ್ನ ಅನಾಥ ಆಶ್ರಮಕ್ಕೆ ಸೇರಿಸಿಬಿಡಿ ಎಂದಿದ್ದಾನೆ. 70 ರಿಂದ 80 ವರ್ಷ ಇರುವ ವೃದ್ಧೆ ಮಾನಸಿಕ ಅಸ್ವಸ್ಥೆ, ಏನು ಮಾಡಲಾಗದ ಸ್ಥಿತಿಯಲ್ಲಿದ್ದಾಳೆ ಎನ್ನುವುದು ಒಂದು ಕಡೆಯಾದರೆ, ಮತ್ತೊಂದೆಡೆ ಮಗನಿಗೆ ಸಾಕಲಾಗುತ್ತಿಲ್ಲ ಎನ್ನುವುದು ಮತ್ತೊಂದು ಕಡೆ….