ಸಾಬ್ರು ಹೆಸರಿಗೆ ಸರ್ಕಾರಿ ಜಮೀನು ಮಾಡಿದ್ರೆ ನೇಣಿಗೆ ಹಾಕುತ್ತೇನೆ; ಶಾಸಕ ರಮೇಶ್ ಬಂಡಿಸಿದ್ದೇಗೌಡ | Srirangapatna Mla Ramesh Bandisiddegowda Threat Over Land Allotment To Muslims Goes Viral Sat
ಮಹದೇವಪುರದಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡರು ಬಗರ್ ಹುಕುಂ ಸರ್ಕಾರಿ ಜಮೀನನ್ನು ಸಾಬ್ರಿಗೆ ನೀಡದಂತೆ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ‘ಸಾಬ್ರು ಹೆಸರಿನಲ್ಲಿ ಜಮೀನು ಪರಭಾರೆಯಾದರೆ ನೇಣಿಗೆ ಹಾಕುವುದು ಗ್ಯಾರಂಟಿ’ ಎಂದು ಎಚ್ಚರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಡ್ಯ (ಜೂ. 23): ‘ಬಗರ್ ಹುಕುಂನಲ್ಲಿ ಅರ್ಜಿ ಹಾಕಿರೋ ಸಾಬ್ರಿಗೆ (ಮುಸ್ಲಿಂ ಸಮುದಾಯದವರಿಗೆ) ಖಾತೆ ಮಾಡಬೇಡಿ. ಸರ್ಕಾರಿ ಜಮೀನು ಸರ್ಕಾರದ್ದಾಗಿಯೇ ಇರಬೇಕು. ಯಾರಾದರೂ ಅದನ್ನು ಸಾಬ್ರು ಹೆಸರಿನಲ್ಲಿ ಪರಭಾರೆ ಮಾಡಿದರೆ, ನೇಣಿಗೆ ಹಾಕುವುದು ಗ್ಯಾರಂಟಿ’ ಎಂದು ಶಾಸಕ…