‘ಅವನು ಓಡಿ ಹೋಗಿ ಮದುವೆ ಆದ, ಕೊನೆಗೆ ಅವಳೇ ಓಡಿ ಹೋದಳು’; ಸಹೋದರನ ವಿಚ್ಛೇದನದ ಬಗ್ಗೆ ಸಲ್ಲು ಟೀಕೆ
ಹಾಸ್ಯನಟ ಕಪಿಲ್ ಶರ್ಮಾ ಅವರ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ (The Great Indian Kapil Show) ಹೊಸ ಸೀಸನ್ ಇದೀಗ ಪ್ರೇಕ್ಷಕರಿಗಾಗಿ ಬಂದಿದೆ. ಈ ಸೀಸನ್‌ನ ಮೊದಲ ಕಂತಿನಲ್ಲಿಯೇ ನಟ ಸಲ್ಮಾನ್ ಖಾನ್ ಅತಿಥಿಯಾಗಿ ಆಗಮಿಸಿದ್ದರು. ಈ ಬಾರಿ ಸಲ್ಮಾನ್ ಮತ್ತು ಕಪಿಲ್ ನಡುವೆ ಸಾಕಷ್ಟು ಚರ್ಚೆ ನಡೆಯಿತು. ಸಲ್ಮಾನ್ ತಮ್ಮ ಸಹೋದರ ಸೊಹೈಲ್ ಖಾನ್ ವಿಚ್ಛೇದನ ಮತ್ತು ಆಮಿರ್ ಖಾನ್ ಅವರ ಮೂರನೇ ಸಂಬಂಧದ ಬಗ್ಗೆಯೂ ಗೇಲಿ ಮಾಡಿದರು. ಈ ಕಂತಿನಲ್ಲಿ, ಕಪಿಲ್…