ಮಂಗಳೂರು: ಅಪಾಯ ಆಹ್ವಾನಿಸುವ ರನ್ವೇ, ವಿಮಾನ ದುರಂತ ಸಂಭವಿಸಿ 15 ವರ್ಷವಾದರೂ ಈಡೇರಿಲ್ಲ ವಿಸ್ತರಣೆ ಬೇಡಿಕೆ
ಮಂಗಳೂರು, ಜೂನ್ 23: ಅದು 2010 ಮೇ 22ರ ಮುಂಜಾನೆ, ಗಲ್ಫ್‌ನಿಂದ ಮಂಗಳೂರಿಗೆ ಹಾರಿಬಂದ ವಿಮಾನ ಲ್ಯಾಂಡಿಂಗ್ ವೇಳೆ ಬಜ್ಪೆಯ ಕಿರಿದಾದ ರನ್ ವೇಯಲ್ಲಿ ಜಾರಿ ಕಣಿವೆಗೆ ಬಿದ್ದು ಭಯಾನಕ ದುರಂತ ಸಂಭವಿಸಿತ್ತು. 158 ಪ್ರಯಾಣಿಕರು ಸಜೀವ ದಹನವಾಗಿದ್ದರು. ಅಂದಿನಿಂದ ಶುರುವಾದ ಮಂಗಳೂರು ವಿಮಾನ ನಿಲ್ದಾಣದ (Mangaluru Airport) ರನ್ ವೇ ವಿಸ್ತರಣೆಯ ಕೂಗು ಇನ್ನೂ ಮೊಳಗುತ್ತಲೇ ಇದೆ. ಇದೀಗ ಅಹಮದಾಬಾದ್ ವಿಮಾನ ದುರಂತ ಬಳಿಕ ಮತ್ತೆ ರನ್ವೇ ವಿಸ್ತರಣೆಯ ಕೂಗು ಜೋರಾಗಿದೆ. ಮಂಗಳೂರು ವಿಮಾನ ನಿಲ್ದಾಣದ…