ಯಾವ್ಯಾವ ವಯಸ್ಸಲ್ಲಿ ನಿಮ್ಮ ಸೇವಿಂಗ್ಸ್ ಕನಿಷ್ಠ ಎಷ್ಟಿರಬೇಕು? ಇಲ್ಲಿದೆ ಕುತೂಹಲಕಾರಿ ಉತ್ತರ
ಎಲ್ಲರೂ ಹಣ ಸಂಪಾದನೆ ಮಾಡುತ್ತಾರೆ. ಆದರೆ ಹಲವರಲ್ಲಿ ಸಂಪಾದನೆಗೆ ತಕ್ಕಂತೆ ಹಣಕಾಸು ಸ್ಥಿತಿ (financial situation) ಇರುವುದಿಲ್ಲ. ತಿಂಗಳಿಗೆ 30,000 ರೂ ದುಡಿಯುವ ವ್ಯಕ್ತಿ 40 ವರ್ಷ ವಯಸ್ಸಿಗೆ ಮನೆ ಕಟ್ಟಿರಬಹುದು, ಕಾರು ತೆಗೆದುಕೊಂಡಿರಬಹುದು. ತಿಂಗಳಿಗೆ 80,000 ರೂ ದುಡಿಯುವ ವ್ಯಕ್ತಿ 40 ವರ್ಷ ವಯಸ್ಸಿನಲ್ಲಿ ಸಾಲದ ಸೋಲಕ್ಕೆ ಸಿಲುಕಿರಬಹುದು. ಹೀಗಾಗಿ, ಹಣ ಗಳಿಕೆಗೂ ಹಣಕಾಸು ಸ್ಥಿತಿಗೂ ಗಾಢ ನಂಟೇನೂ ಇರುವುದಿಲ್ಲ. ಹಾಗಿದ್ದರೆ ನಮ್ಮ ಬಳಿ ಎಷ್ಟು ಹಣ ಇರಬೇಕು? ಯೌವ್ವನದಲ್ಲಿ ಎಷ್ಟು ಹಣ ಇದ್ದಿರಬೇಕು, ಮಧ್ಯಪ್ರಾಯ…