ಮೋದಿ ತವರಲ್ಲಿ 18 ವರ್ಷದಿಂದ ಸಿಗದ ಸ್ಥಾನ, ದೆಹಲಿ ಬಿಟ್ಟು ಗುಜರಾತ್‌ನಲ್ಲಿ ಬಲಗೊಳ್ಳುತ್ತಾ ಆಪ್? | By Election Results Aap Wins Assembly Seat Bjp Failed To Capture For 18 Years
4 ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಮೋದಿ ತವರಲ್ಲಿ ಕಳೆದ 18 ವರ್ಷದಿಂದ ಬಿಜೆಪಿಗೆ ಸಿಗದ ಸ್ಥಾನ ಈ ಬಾರಿಯೂ ಕೈತಪ್ಪಿದೆ. ನವದೆಹಲಿ (ಜೂ.24): ಇತ್ತೀಚೆಗೆ ನಡೆದ 4 ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಅಚ್ಚರಿಯ ರೀತಿಯಲ್ಲಿ ಬಿಜೆಪಿ ಆಡಳಿತದ ಗುಜರಾತ್‌ನ ವಿಸಾವದರ್ ಕ್ಷೇತ್ರದಲ್ಲಿ ಆಮ್‌ಆದ್ಮಿ ಪಕ್ಷ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ 18 ವರ್ಷಗಳಿಂದ ಕೈವಶವಾಗದ ಸ್ಥಾನ ವಶಪಡಿಸಿಕೊಳ್ಳುವ ಬಿಜೆಪಿ ಯತ್ನ ಮತ್ತೆ ವಿಫಲವಾಗಿದೆ….