ಎಲ್ಲಾ ತಲೆನೋವು ಮೈಗ್ರೇನ್ ಅಲ್ಲ, ನಿಮಗೆ ತಿಳಿದಿರಲಿ ಈ ವಿಚಾರ : ಡಾ. ರೋಹಿತ್ ಪೈ
ಮೈಗ್ರೇನ್ (Migraine) ಇತ್ತೀಚೆಗೆ ಸಾಕಷ್ಟು ಜನರನ್ನು ಬಾಧಿಸುತ್ತಿರುವ ಸಮಸ್ಯೆ. ಯುವಕರಿಂದ ಮಧ್ಯವಯಸ್ಕರವರೆಗೆ ಸಾಕಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನೂ ಹಲವರು ಸಾಮಾನ್ಯ ತಲೆನೋವನ್ನೂ ಮೈಗ್ರೇನ್ ಎಂದು ತಪ್ಪಾಗಿ ತಿಳಿದುಕೊಂಡಿದ್ದಾರೆ. ಹೀಗಾಗಿ ಈ ಮೈಗ್ರೇನ್ ಸಮಸ್ಯೆ ಹಾಗೂ ಚಿಕಿತ್ಸೆಯಲ್ಲಿ ಇರುವ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ಮಂಗಳೂರಿನ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯ ವೈದ್ಯರಾದ ಕನ್ಸಲ್ಟೆಂಟ್ ನ್ಯೂರೊಲಾಜಿಸ್ಟ್ ಡಾ. ರೋಹಿತ್ ಪೈ (Dr. Rohit Pai, Consultant Neurologist, KMC Hospital)…