ಚಿರಂಜೀವಿಗೂ ಈ ಕನ್ನಡತಿ ಮೇಲೆ ಕ್ರಶ್.. ಶ್ರೀದೇವಿ ಜೊತೆ ಹೋಲಿಸಿದ ನಾಗಾರ್ಜುನ; ಏನಿದು ರಶ್ಮಿಕಾ ಮಾಯೆ..!? | Chiranjeevi Had Crush And Nagarjuna Compares Rashmika Mandanna With Sridevi
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಅನ್ನೋ ಬಿರುದು ಸಿಕ್ಕು ಬಹಳಾನೇ ದಿನವಾಯ್ತು. ಆದ್ರೆ ಈಗ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕೂಡ ತಮಗೆ ರಶ್ಮಿಕಾ ಮಂದಣ್ಣ (Rashmika Mandanna) ಮೇಲೆ ತಮಗೆ ಕ್ರಶ್ ಇದೆ ಅಂದಿದ್ದಾರೆ. ಚಿರು ಮಾತ್ರ ಅಲ್ಲ ನಾಗಾರ್ಜುನ, ಧನುಷ್ ಕೂಡ ರಶ್ಮಿಕಾನ ಹಾಡಿ ಹೊಗಳಿದ್ದಾರೆ. ಸೋ ಕುಬೇರ ಸಕ್ಸಸ್ ಖುಷಿಯಲ್ಲಿರೋ ರಶ್ಮಿಕಾ ಸಂತಸದ ಅಲೆಯಲ್ಲಿ ತೇಲ್ತಾ ಇದ್ದಾರೆ. ಹೌದು, ನ್ಯಾಷನಲ್ ಕ್ರಶ್ ರಶ್ಮಿಕಾ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಕಳೆದ ವಾರ ರಶ್ಮಿಕಾ ನಟಿಸಿರೋ ಕುಬೇರ…